3000 ಹೆಚ್ಚು ಕಲಾವಿದರು, ತಂತ್ರಜ್ಞರಿಗೆ ತಲಾ 5000 ರೂ ನೀಡಲು ನಟ ಯಶ್ ನಿರ್ಧಾರ

ಬೆಂಗಳೂರು.ಜೂ.1- ಕೊರೋನಾ ಸೋಂಕಿನ ಸಂಕಷ್ಟಕ್ಕೆ ಸಿಲುಕಿರುವ ಚಿತ್ರರಂಗದ ಕಲಾವಿದರು ಕಾರ್ಮಿಕರು, ತಂತ್ರಜ್ಞರ ನೆರವಿಗೆ ನಟ ಯಶ್ ಧಾವಿಸಿದ್ದಾರೆ.

ಪ್ರತಿಯೊಬ್ಬರ ಖಾತೆಗೆ ತಲಾ 5000 ಸಾವಿರ ರೂಪಾಯಿ ನಂತೆ ಮೂರು ಸಾವಿರಕ್ಕೂ ಅಧಿಕ ಕಲಾವಿದರು, ತಂತ್ರಜ್ಞರು,ಕಾರ್ಮಿಕರು ಸೇರಿದಂತೆ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಮಂದಿಗೆ ತಮ್ಮ ವಯಕ್ತಿಕ ಹಣದಲ್ಲಿ ನೀಡಲು ಮುಂದಾಗಿದ್ದಾರೆ.

ಕಲಾವಿದರು ಕಾರ್ಮಿಕರು ತಂತ್ರಜ್ಞರಿಗೆ ಅವರ ಖಾತೆಗೆ ಹಣ ಜಮಾ ಮಾಡುವ ಸಂಬಂಧ ಚಲನಚಿತ್ರ ಕಾರ್ಮಿಕರ ಕಲಾವಿದರ ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಸಾರಾ ಗೋವಿಂದು, ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಅವರೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಲಾವಿದರು ಕಾರ್ಮಿಕರು ತಂತ್ರಜ್ಞರ ಬ್ಯಾಂಕ್ ಖಾತೆಯ ಸಂಖ್ಯೆ ಸಿಕ್ಕ ತಕ್ಷಣವೇ ಎಲ್ಲರ ಖಾತೆಗೆ ನೇರವಾಗಿ ಹಣ ಜಮೆ ಮಾಡುವುದಾಗಿ ಅವರು ತಿಳಿಸಿದ್ದಾರೆ

ಕಳೆದೊಂದು ವರ್ಷದಿಂದ ಚಿತ್ರರಂಗದಲ್ಲಿ ಯಾವುದೇ ಚಟುವಟಿಕೆ ಇಲ್ಲದೆ ಇಡೀ ಚಿತ್ರರಂಗ ಕೈಕಟ್ಟಿ ಉಳಿಯುವಂತಾಗಿದೆ ಇಂತಹ ಸಮಯದಲ್ಲಿ ಅವರ ಬೆಂಬಲಕ್ಕೆ ನಿಲ್ಲುವುದು ನಮ್ಮ ಕರ್ತವ್ಯ . ಈ ಹಿನ್ನೆಲೆಯಲ್ಲಿ ತಮ್ಮ ಕೈಲಾದ ಸೇವೆ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ನಾನು ಮಾಡುತ್ತಿರುವ ಸಣ್ಣ ಸಹಾಯ ಎಲ್ಲ ಸಂಕಷ್ಟಗಳಿಗೆ ಪರಿಹಾರ ಎಂದು ಹೇಳುವುದಿಲ್ಲ ಬದಲಾಗಿ ಪ್ರಸ್ತುತ ಸಂದರ್ಭದಲ್ಲಿ ಕಲಾವಿದರು ತಂತ್ರಜ್ಞರಿಗೆ ಉಪಯೋಗಕ್ಕೆ ಬರಲಿದೆ ಎನ್ನುವ ಭಾವನೆ ನನ್ನದು ಎಂದು ಅವರು ತಿಳಿಸಿದ್ದಾರೆ

ಇತರರ ಸಹಾಯಕ್ಕೆ ಮನವಿ:

ಹೃದಯವಂತರು ಮತ್ತು ಹಣವಿರುವ ಮಂದಿ ಕಲಾವಿದರು ಕಾರ್ಮಿಕರು ತಂತ್ರಜ್ಞರಿಗೆ ಇನ್ನಷ್ಟು ನೆರವು ನೀಡಿದರೆ ಅವರ ಕಷ್ಟಕಾಲದಲ್ಲಿ ನೆರವಿಗೆ ಬರಲಿದೆ ಎನ್ನುವ ಅಭಿಪ್ರಾಯ ನನ್ನದು ಎಂದು ಅವರು ತಿಳಿಸಿದ್ದಾರೆ.

ಸಂಕಷ್ಟದಲ್ಲಿರುವ ಜನಸಮುದಾಯದ ಜೊತೆಗೆ ನಿಲ್ಲುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಹೀಗಾಗಿ ತಮ್ಮ ಕೈಲಾದ ಸಹಾಯ ಮತ್ತು ನೆರವನ್ನು ಕಷ್ಟದಲ್ಲಿರುವವರಿಗೆ ನೀಡುವಂತೆ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ