3000 ಸೋಂಕಿತರು ನಾಪತ್ತೆ: ಸಚಿವ ಅಶೋಕ್ ಬಹಿರಂಗ

ಬೆಂಗಳೂರು, ಏ.28-ನಗರದಲ್ಲಿ ಮೂರು ಸಾವಿರ ಸೋಂಕಿತರು ನಾಪತ್ತೆಯಾಗಿರುವುದನ್ನು ಸ್ವತಃ ಕಂದಾಯ ಸಚಿಚ ಆರ್ .ಅಶೋಕ್ ಬಹಿರಂಗ ಪಡಿಸಿದ್ದು, ಈ ರೀತಿ ತಪ್ಪಿಸಿಕೊಂಡವರು ಸೋಂಕು ಹರಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಾಪತ್ತೆಯಾದವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಕೋವಿಡ್ ಸೋಂಕಿಗೆ ಒಳಗಾದವರಲ್ಲಿ ಹೆಚ್ಚಿನವರು ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ ಮತ್ತು ಜನರು ತಮ್ಮ ಇರುವಿಕೆಯ ಬಗ್ಗೆ ಇತರರಿಗೆ ತಿಳಿಸುತ್ತಿಲ್ಲ. ಇದು ಪರಿಸ್ಥಿತಿಯನ್ನು ಕಷ್ಟಕರವಾಗಿಸುತ್ತಿದೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಕನಿಷ್ಠ 2,000 ದಿಂದ 3,000 ಜನರು ತಮ್ಮ ಫೋನ್ ಸ್ವಿಚ್ ಆಫ್ ಮಾಡಿ ತಮ್ಮ ಮನೆಗಳನ್ನು ತೊರೆದಿದ್ದಾರೆ ಊಹಿಸಿರುವ ಅವರು ಎಲ್ಲಿಗೆ ಹೋಗಿದ್ದಾರೆಂಬ ಬಗ್ಗೆ ಮಾಹಿತಿ ಇಲ್ಲ ಅವರು ಸ್ಪಷ್ಟಪಡಿಸಿರು.
ಸೋಂಕಿತರಿಗೆ ತಮ್ಮ ಫೋನ್‌ಗಳನ್ನು ಸ್ವಿಚ್ ಆನ್ ಮಾಡುವಂತೆ ಮನವಿ ಮಾಡುತ್ತೇನೆ. ಅವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸೂಚಿಸಲಾಗಿದೆ. ಅವರ ಈ ನಡವಳಿಕೆಯಿಂದ ಮಾತ್ರ ಕೋವಿಡ್ ಪ್ರಕರಣಗಳು ಹೆಚ್ಚಾಗಲಿದೆ. ನಾನು ಕೈಮುಗಿದು ಪ್ರಾರ್ಥಿಸುತ್ತೇನೆ. ನೀವು ಕೊನೆಯ ಕ್ಷಣದಲ್ಲಿ ಐಸಿಯು ಹಾಸಿಗೆ ಅಗತ್ಯವಿದ್ದಾಗ ಆಸ್ಪತ್ರೆಗೆ ಆಗಮಿಸಿದರೆ ಅದು ತಪ್ಪು ನಡವಳಿಕೆಯಾಗಲಿದೆ ಎಂದು ಅಶೋಕ್ ತಿಳಿಸಿದರು.