
ಸಂಜೆವಾಣಿ ನ್ಯೂಸ್
ಮೈಸೂರು: ಆ.04:- ಏಳು ತಿಂಗಳ ಹಿಂದೆ ವನ್ ಪ್ಲಸ್ ಮೊಬೈಲ್ ಖರೀದಿಸಿದ ಕೆಲವೇ ದಿನಗಳಲ್ಲಿ ಆಟೊರಿಕ್ಷಾದಲ್ಲಿ ಹೋಗುವಾಗ ಕಳೆದುಕೊಂಡಿದ್ದೆ. ದಿನನಿತ್ಯ ಅದೇ ಚಿಂತೆಯಲ್ಲಿದ್ದೆ. ಮೊಬೈಲ್ ಮರಳಿ ದೊರಕಿರುವುದು ಖುಷಿಯಾಗಿದೆ ಎಂದು ಕುವೆಂಪು ನಗರ ನಿವಾಸಿ ಜ್ಯೋತಿಲಕ್ಷ್ಮೀ ಸಂತಸಗೊಂಡರು.
ನಗರ ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಂದ ಸಾರ್ವಜನಿಕರು ಕಳೆದುಕೊಂಡಿದ್ದ ಸುಮಾರು 30 ಲಕ್ಷ ಮೌಲ್ಯದ 137 ಮೊಬೈಲ್‍ಗಳನ್ನು ಇಲ್ಲಿನ ಸಿಇಎನ್ ಕ್ರೈಂ ಠಾಣೆ ಪೆÇಲೀಸರು ಪತ್ತೆ ಮಾಡಿದ್ದು, ಗುರುವಾರ ನಗರ ಪೆÇಲೀಸ್ ಆಯುಕ್ತರ ಕಚೇರಿಯಲ್ಲಿ ರಮೇಶ್ ಬಾನೋತ್ ವಾರಿಸುದಾರರಿಗೆ ಮೊಬೈಲ್‍ಗಳನ್ನು ಹಸ್ತಾಂತರಿಸಿದರು.
ಯುವ ದಸರಾಕ್ಕೆ ಬಂದಿದ್ದಾಗ ಮೊಬೈಲ್ ಕಳೆದು ಹೋಗಿತ್ತು. ಅದು ಮತ್ತೆ ಕೈ ಸೇರುತ್ತದೆ ಎಂಬ ಭರವಸೆ ಇರಲಿಲ್ಲ. ಪೆÇಲೀಸರ ಪ್ರಯತ್ನದಿಂದ ಮೊಬೈಲ್ ದೊರಕಿದೆ ಎಂದು ಹೆಬ್ಬಾಳದ ನಿವಾಸಿ ಸುಶ್ಮಿತಾ ತಿಳಿಸಿದರು.
ಕೇರಳ, ತಮಿಳುನಾಡು, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ತನಿಖೆ ನಡೆಸಿ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಮೊಬೈಲ್ ಕಾಣೆಯಾದವರು ನೀಡಿದ ಮಾಹಿತಿ ಆಧರಿಸಿ ಸಿಇಐಆರ್ ಪೆÇೀರ್ಟಲ್ ಮೂಲಕ ಮೊಬೈಲ್‍ಗಳನ್ನು ಪತ್ತೆ ಮಾಡಲಾಗಿದೆ. ಕಳುವಾದ ಮೊಬೈಲ್‍ಗಳನ್ನು ಬೇರೊಬ್ಬರು ಕಡಿಮೆ ಬೆಲೆಗೆ ಖರೀದಿಸಿದ್ದರು. ಅವರಿಂದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೆÇಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.
ಸಾರ್ವಜನಿಕರು ಮೊಬೈಲ್ ಫೆÇೀನ್ ಪತ್ತೆಗಾಗಿ ಸಿಐಆರ್ ಪೆÇೀರ್ಟಲ್ ಬಳಸಿಕೊಳ್ಳಿ. ಮೊಬೈಲ್ ಕಳೆದುಕೊಂಡರೆ 6363255135 ಸಂಖ್ಯೆಗೆ ಮೆಸೇಜ್ ಮಾಡಿ ಮಾಹಿತಿ ನೀಡಿ ಎಂದರು.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ.ಮುತ್ತುರಾಜು, ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಜಾಹ್ನವಿ ಇದ್ದರು.