30 ರಂದು ಹುಣಚೇರಾಯಲಿಂಗ ಮಹಾರಾಜರ ಜಾತ್ರೆ

ಕಲಬುರಗಿ,ಮಾ 28: ತಾಲೂಕಿನ ಖಣದಾಳ ಗ್ರಾಮದ ಆನಂದಾಶ್ರಮದಲ್ಲಿ ಹುಣಚೇರಾಯಲಿಂಗ ಮಹಾರಾಜರ 36 ನೇ ಜಾತ್ರಾ ಮಹೋತ್ಸವ ಮಾ. 30 ರಂದು ನಡೆಯಲಿದೆ.
30 ರಂದು ಅಭಿಷೇಕ,ಅಗ್ನಿಪೂಜೆ, ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಪಲ್ಲಕ್ಕಿ ಮೆರವಣಿಗೆ ,ನಂತರ ತುಲಾಭಾರ ಕಾರ್ಯಕ್ರಮ, ಪೂಜ್ಯರ ಪ್ರವಚನ ,ಸಾಯಂಕಾಲ 6 ಗಂಟೆಗೆ ರಥೋತ್ಸವ ನಡೆಯಲಿದೆ .ಜಾತ್ರೆಯ ನಿಮಿತ್ತ ವಿವಿಧ ಡೊಳ್ಳಿನ ಮತ್ತು ಭಜನಾ ಮೇಳಗಳು ಪಾಲ್ಗೊಳ್ಳಲಿವೆ ಎಂದು ಸಕಲ ಸದ್ಭಕ್ತ ಮಂಡಳಿಯವರು ತಿಳಿಸಿದ್ದಾರೆ.