
ಕಲಬುರಗಿ,ಏ 25: ಜಿಲ್ಲೆ ಶಹಾಬಾದ ತಾಲೂಕಿನ ತೋನಸನಹಳ್ಳಿ (ಎಸ್) ಗ್ರಾಮದ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಸಂಗಮೇಶ್ವರರ ರಥೋತ್ಸವ ಏ.30 ರಂದು ಜರುಗಲಿದೆ. ರಥೋತ್ಸವದ ನಂತರ ವಿವಿಧ ಕ್ಷೇತ್ರದ ಸಾಧಕರಿಗೆ ಸಂಗಮೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಸಮಾರಂಭದಲ್ಲಿ ಹಾರನಹಳ್ಳಿ ಕೋಡಿ ಮಠದ ಪೂಜ್ಯರು ನಾಲವಾರ ದೇವಾಪುರ ಸ್ಟೇಷನ್ ಬಬಲಾದ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಹರ ಗುರು ಚರಮೂರ್ತಿಗಳು ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.
ವೈದ್ಯರಾದ ಡಾ.ಸಂಜನಾ ಪಾಟೀಲ ತಳ್ಳೂರ,ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮೀ ಕಿರಣ ಪಾಟೀಲ ಮಾಕ ,ಉದ್ಯಮಿ ದೀಪಾ ಆನಂದ ದಂಡೋತಿ,ಯನೈಟೇಡ ಆಸ್ಪತ್ರೆ ಮಾರ್ಕೇಟಿಂಗ್ ಅಡ್ಮಿನಿಸ್ಟೇಟರ್‍ರಾಚಣ್ಣ ಮೇಲಕೇರಿ, ಬಸವ ಜಯಂತೋತ್ಸವ ಸಮಿತಿ ಉಪಾಧ್ಯಕ್ಷ ಮಲ್ಲಿನಾಥ ಪಾಟೀಲ ಕಾಳಗಿ,ಹೋರಾಟಗಾರ ಎಂ.ಎಸ್ ಪಾಟೀಲ ನರಿಬೋಳ,ನಿವೃತ್ತ ಲೆಕ್ಕ ಪರಿಶೋಧಕ ಬಸವರಾಜ ಕೋಳಕೂರ ಅವರಿಗೆ ಸಂಗಮೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವದು.