30 ರಂದು ಯಾಜ್ಞವಲ್ಕ್ಯ ಮಹರ್ಷಿಗಳ ಜಯಂತಿ

ಕಲಬುರಗಿ,ಮೇ 25 :ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿಗಳ ಜಯಂತ್ಯುತ್ಸವವನ್ನು ಮೇ 30 ರಂದು ನಗರದ ಸಂಗಮೇಶ್ವರ ಕಾಲೋನಿ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.ಕಲಬುರಗಿಯ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾಸಮಿತಿಯು ಕಾರ್ಯಕ್ರಮ ಆಯೋಜಿಸಿದ್ದು,ಅಂದು ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಧಾರ್ಮಿಕ,ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿವೆ.ಬೆಳಿಗ್ಗೆ 7 ಗಂಟೆಗೆ ಯೋಗೀಶ್ವರ ಯಾಜ್ಞವಲ್ಕ್ಯ ಗುರುಗಳ ಸಾಮೂಹಿಕ ಅಷ್ಟೋತ್ತರ ಶತನಾಮ ಪಾರಾಯಣ,8.30ಕ್ಕೆ ಪಲ್ಲಕ್ಕಿ ಉತ್ಸವ ನಡೆಯಲಿದ್ದು
ಶ್ರೀ ಮೈತ್ರೇಯಿ ಭಜನಾ ಮಂಡಳಿ, ಶ್ರೀ ಗೌರಿ ಭಜನಾ ಮಂಡಳಿ ನ್ಯೂ ರಾಘವೇಂದ್ರ ಕಾಲೋನಿ, ಹಾಗೂ ಯಾಜ್ಞವಲ್ಕ ಯುವ ಮಂಡಳಿಯವರು ಪಾಲ್ಗೊಳ್ಳುವರು.ಬೆಳಿಗ್ಗೆ 9.30ಕ್ಕೆ ಧನ್ವಂತರಿ ಹೋಮವು,ವೇ.ಮೂ. ಭೀಮಪ್ಪಯ್ಯ ದೇವರು ಅವರ ಅಧ್ವರ್ಯದಲ್ಲಿ ವೇ.ಮೂ. ಆಕಾಶರಾಜಾಚಾರ್ಯ ಮತ್ತು ರಾಮಾಚಾರ್ಯ ಇವರ ನೇತೃತ್ವದಲ್ಲಿ ನಡೆಯಲಿದೆ.ಮಧ್ಯಾಹ್ನ 12ಕ್ಕೆ ಪಂಡಿತ ಆಕಾಶರಾಜಾಚಾರ್ಯ ಅವರಿಂದ ಯೋಗೀಶ್ವರ ಯಾಜ್ಞವಲ್ಕ್ಯರ ಕುರಿತು ಉಪನ್ಯಾಸ,ನಂತರ 12-30 ಕ್ಕೆ ಶ್ರೀ ಮೈತ್ರೇಯಿ ಭಜನಾ ಮಂಡಳಿಯವರಿಂದ ಭಜನೆ ನಡೆಯಲಿದೆ. ಸಂಜೆ 6.15 ಕ್ಕೆ ಸೌಖ್ಯ ಮತ್ತು ಪ್ರಾರ್ಥನಾ ಅವರಿಂದ ಭರತನಾಟ್ಯ ಕಾರ್ಯಕ್ರಮ, 7 ಗಂಟೆಗೆ ಡಾ.ಸುನಂದಾ ಬಿ. ಸಾಲವಾಡಗಿ ಅವರಿಂದ ದಾಸವಾಣಿ ಜರುಗುವದು ಎಂದು ಸಮಿತಿ ಅಧ್ಯಕ್ಷ ಮಲ್ಹಾರರಾವ ಕುಲಕರ್ಣಿ ಗಾರಂಪಳ್ಳಿ,ಕಾರ್ಯದರ್ಶಿ ರಾಘವೇಂದ್ರ ವಕೀಲರು ಮತ್ತು ಖಜಾಂಚಿ ಅಶೋಕ ಮಳ್ಳಿ ಅವರು ತಿಳಿಸಿದ್ದಾರೆ.