30 ರಂದು ಮತ ಏಣಿಕೆ

ವಿಜಯಪುರ ಡಿ.28 : ಜಿಲ್ಲೆಯಲ್ಲಿ ಆಯಾ ತಾಲೂಕಿನಲ್ಲಿ ದಿನಾಂಕ : 30-12-2020 ರಂದು ಬೆಳಿಗ್ಗೆ 8-00 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.

ಅದರಂತೆ ಮತ ಎಣಿಕೆ ಕೊಠಡಿಗಳಲ್ಲಿ ಅಭ್ಯರ್ಥಿ ಅಥವಾ ಅಭ್ಯರ್ಥಿಯ ಚುನಾವಣಾ ಏಜೆಂಟ್ ಅಥವಾ ಮತ ಎಣಿಕೆ ಏಜೆಂಟರ್‍ನ್ನು ಹೊರತುಪಡಿಸಿ ಮತ ಎಣಿಕೆ ಕೇಂದ್ರಗಳಲ್ಲಿ ಬೇರೆಯರಿಗೆ ಪ್ರವೇಶ ನಿಷೇಧಿಸಲಾಗಿದೆ. ಹಾಗೂ ಮತ ಎಣಿಕೆ ಕೇಂದ್ರಗಳಿಗೆ ಆಗಮಿಸುವ ಅಭ್ಯರ್ಥಿ ಅಥವಾ ಅಭ್ಯರ್ಥಿಯ ಚುನಾವಣಾ ಏಜೆಂಟ್‍ರುಗಳು ಮೊಬೈಲ್, ಬೆಂಕಿ ಪೊಟ್ಟಣ, ಶಾಹಿ ಇರುವ ಪೆನ್ನು, ಕುಡಿಯುವ ನೀರಿನ ಬಾಟಲ್‍ಗಳನ್ನು ಹಾಗೂ ಧೂಮಪಾನದಂತಹ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ -2020 ಕ್ಕೆ ಸಂಬಂಧಪಟ್ಟಂತೆ ಮಾದರಿ ನೀತಿ ಸಂಹಿತೆ ಹಿನ್ನೆಲೆ ದಿನಾಂಕ 30-11-2020 ರಿಂದ ಇಲ್ಲಿಯವರೆಗೆ 406 ಲೀ ಮದ್ಯ ಅದರ ಮೌಲ್ಯ 1,61,648 ಹಾಗೂ 13 ದ್ವಿಚಕ್ರ ವಾಹನ ಮತ್ತು 1 ಆಟೋ ಸೀಜ್ ಒಳಗೊಂಡು ಮೌಲ್ಯ 6,00,000 ಆಗಿದ್ದು, ಒಟ್ಟು 1150 ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.