30 ರಂದು ಕಂದಗೂಳಿಂದ ರೇವಗ್ಗಿ (ರಟಕಲ್ ) ದೇವಸ್ಥಾನಕ್ಕೆ ಪಾದಯಾತ್ರೆ

ಕಾಳಗಿ: ಎ.28:ಗೋಪಾಲ ರಾವ ಜಾಧ ವ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಿದ ಜಗದ್ಗುರು ರೇಣುಕಾಚಾರ್ಯರರ ಮೂರ್ತಿ ಪ್ರತಿಮೇಯ ಲಿಂಗದ ಮೇಲೆ ಜಾಧವ ಕುಟುಂಬದವರ ಯಾವುದೇ ನಾಮ ಫಲಕ ಅಳವಡಿಸಿಲ್ಲ, ಇದು ಸತ್ಯಕ್ಕೆ ದೂರವಾಗಿ ಆರೋಪವಾಗಿದೆ ಎಂದು ಕೆಲವು ಸಂಸದರ ಆಪ್ತರು ಪ್ರತಿಕ್ರಿಯೆ ನೀಡಿದ್ದಾರೆ, ಇದು ಘಟನೆ ಸತ್ಯವೋ ಸುಳ್ಳು ಅನ್ನುವುದಾದರೆ ರೇವಗ್ಗಿ (ರಟಕಲ್) ಜಗದ್ಗುರು ರೇಣುಕಾಚಾರ್ಯರರ ಮೂರ್ತಿ ಮುಟ್ಟಿ ಪ್ರಮಾಣಕ್ಕೆ ಸಿದ್ದರಾಗಿ ಬನ್ನಿ ತಾಲ್ಲೂಕಿನ ವೀರಶೈವರು ಪಾದಯಾತ್ರೆಗೆ ಸಿದ್ದರಾಗಿದ್ದೇವೆ
ಎಂದು ಕಾಳಗಿ ತಾಲ್ಲೂಕಿನ ವೀರಶೈವ ಲಿಂಗಾಯತ ಹಿರಿಯ ಮುಖಂಡ ಮಲ್ಲಿಕಾರ್ಜುನ ಪಾಟೀಲ ಹುಳಗೇರಾ ಹೇಳಿದರು.

ಕಾಳಗಿ ಪಟ್ಟಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ದಿನಾಂಕ 30 ರಂದು ಕಂದಗೂಳ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ರೇವಗ್ಗಿ (ರಟಕಲ್) ಶ್ರೀ ಕ್ಷೇತ್ರದ 51 ಅಡಿ ಜಗದ್ಗುರು ರೇವಣಸಿದ್ದೇಶ್ವರ ಮೂರ್ತಿಯ ಸ್ಪಟಿಕ ಲಿಂಗದ ಎದುರು ಸ್ವಾಮಿಯ ಭಕ್ತರು ತಪ್ಪಿನ ಅರಿವಿನ ಪ್ರಮಾಣ ಅಪ್ರಮಾಣದ ಕಾರ್ಯ ಹಮ್ಮಿಕೊಳ್ಳಲಾಗಿದೆ ಹೀಗಾಗಿ ತಾಲ್ಲೂಕಿನ ಮಠಾಧೀಶರು ವಿವಿಧ ವೀರಶೈವ ಲಿಂಗದ ಲಿಂಗಾಯತರು ಧರ್ಮದ ಶಕ್ತಿ ಪ್ರದರ್ಶನ ಕೈಗೋಳಲಿದ್ದಾರೆ ಎಲ್ಲರೂ ಭಾಗವಹಿಸಬೇಕಾಗಿ ಎಂದು ಮನವಿ ನೀಡಿದರು.

ರೇವಣಸಿದ್ದಪ್ಪ ಮಾಸ್ಟರ್, ಶಿವಶರಣಪ್ಪ ಚೆನ್ನೂರ, ಧರ್ಮರಾಜ ಬಿರಾದರ ಕಲ್ಲಹಿಪ್ಪರಗಾ, ಅಂಬಣ್ಣಾ ಶೆಳ್ಳಗಿ, ರೇವಣಸಿದ್ದಪ್ಪ ಸಾತನೂರ, ಲ ಶಿವಕುಮಾರ ಕಮಲಾಪುರ, ಮಾತನಾಡಿದರು. ವೇದಪ್ರಕಾಶ ಮೋಟಗಿ, ಜಗನ್ನಾಥ ಚಂದನಕೇರಿ, ರಾಘವೇಂದ್ರ ಗುತ್ತೇದಾರ ಸೇರಿ ಅನೇಕರಿದ್ದರು