30 ಕೋಟಿ ಡೋಸ್ ಖರೀದಿಗೆ ಒಪ್ಪಂದ

ನವದೆಹಲಿ,ಜೂ.೩- ದೇಶದಲ್ಲಿ ಕೊರೋನಾ ಸೋಂಕಿನ ಲಸಿಕೆ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿವಿಧ ಮೂಲಗಳಿಂದ ಲಸಿಕೆ ಖರೀದಿಗೆ ಮುಂದಾಗಿದ್ದು ಭಾರತ್ ಭಯೋಟೆಕ್ ಸಂಸ್ಥೆಯ ಬಳಿಕ ಎರಡನೇ ದೇಸೀಯ ಲಸಿಕಾ ಕಂಪನಿಯೊಂದಿಗೆ ದೊಡ್ಡ ಪ್ರಮಾಣದಲ್ಲಿ ಲಸಿಕೆ ಖರೀದಿಗೆ ಮುಂದಾಗಿದೆ.
ಹೈದರಾಬಾದ್ ಮೂಲದ ದೇಶೀಯ ಲಸಿಕೆ ತಯಾರಕ ಸಂಸ್ಥೆ ಜೈವಿಕ-ಇ ಜೊತೆ ೩೦ ಕೋಟಿ ಕೋವಿಡ್-೧೯ ಲಸಿಕೆ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು ಇದಕ್ಕಾಗಿ ಮುಂಗಡವಾಗಿ ೧೫೦೦ ಕೋಟಿ ರೂಪಾಯಿ ಪಾವತಿಸಲು ಮುಂದಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ
೩೦ ಕೋಟಿ ಡೋಸ್ ಲಸಿಕೆಯ ಆಗಸ್ಟ್-ಡಿಸೆಂಬರ್ ೨೦೨೧ ಅವಧಿಯಲ್ಲಿ ಲಭ್ಯವಾಗಲಿದೆ. ಮೆಸರ್ಸ್ ಜೈವಿಕ-ಇ ತಯಾರಿಸಿ ಸಂಗ್ರಹಿಸುತ್ತದೆ ಇದರಿಂದ ಮುಂದಿನ ದಿನಗಳಲ್ಲಿ ಲಸಿಕೆ ಕೊರತೆ ದೂರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ದೇಶದಲ್ಲಿ ಎದುರಾಗಿರುವ ಕೊರೊನಾ ಸೋಂಕಿನ ಲಸಿಕಾ ಕೊರತೆ ದೂರ ಮಾಡುವ ನಿಟ್ಟಿನಲ್ಲಿ “ಲಸಿಕಾ ಮೈತ್ರಿ” ಯೋಜನೆಯಡಿ ಲಸಿಕೆ ಪಡೆಯಲು ಮುಂದಾಗಿದೆ.
ಬಯೋಲಾಜಿಕಲ್ – ಇ ಲಸಿಕೆ ಮೊದಲ ಮತ್ತು ಎರಡನೇ ಹಂತದ ಪ್ರಯೋಗದಲ್ಲಿ ಯಶಸ್ಸು ಕಂಡಿದೆ. ಸದ್ಯ ಮೂರನೇ ಹಂತದ ಪ್ರಯೋಗದಲ್ಲಿ ಇದ್ದು ಲಸಿಕೆ ಸಂಪೂರ್ಣ ಯಶಸ್ವಿಯಾಗಲಿ ರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ
ಪ್ರಸ್ತುತ ಹಂತ-೩ ವೈದ್ಯಕೀಯ ಪ್ರಯೋಗಗಳಿಗೆ ಒಳಗಾಗುತ್ತಿರುವ ಲಸಿಕೆಯು ಮುಂದಿನ ಕೆಲವು ತಿಂಗಳುಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ದೇಶದಲ್ಲಿ ದಿನನಿತ್ಯ ಕೊರೊನಾ ಸೋಂಕು ಸಂಖ್ಯೆ ನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಅಭಾವ ದೂರ ಮಾಡಲು ಅಮೆರಿಕ , ರಷ್ಯಾ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಿಂದ ಲಸಿಕೆ ಖರೀದಿ ಒಪ್ಪಂದ ಮಾಡಿಕೊಳ್ಳುತ್ತಿರುವ ನಡುವೆಯೇ ೩೦ಕೋಟಿ ಲಸಿಕೆ ಖರೀದಿಗೆ ಮುಂದಾಗಿರುವುದು ಲಸಿಕೆ ಪಡೆಯುವ ಜನರಲ್ಲಿ ವಿಶ್ವಾಸ ಮೂಡಲಿದೆ.

ಇದರ ಜೊತೆಗೆ ದೇಶಿಯ ಔಷಧ ತಯಾರಿಕಾ ಕಂಪನಿಗಳಿಂದ ಲಸಿಕೆ ಪ್ರಮಾಣವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚು ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ

ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ದೇಶದ ಎಲ್ಲ ಜನರಿಗೆ ಲಸಿಕೆ ಹಾಕುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ

ಎರಡನೇ ದೇಶೀಯ ಲಸಿಕೆ

ದೇಶದಲ್ಲಿ ಎದುರಾಗಿರುವ ಕೋರೊಕಾ ಸೋಂಕಿನ ಲಸಿಕೆ ದೂರ ಮಾಡುವ ನಿಟ್ಟಿನಲ್ಲಿ ಮುಂದಾಗಿರುವ ಕೇಂದ್ರ ಸರ್ಕಾರ ಎರಡನೇ ದೇಶೀಯ ಲಸಿಕೆ ಬಯೊಲಾಜಿಕಲ್ ಇ ೩೦ ಕೋಟಿ ಡೋಸ್ ಖರೀದಿಸಲು ಮುಂದಾಗಿದೆ.

ಇದಕ್ಕಾಗಿ ೧೫೦೦ ಕೋಟಿ ರೂಪಾಯಿ ಪಾವತಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಆಗಸ್ಟ್ ನಿಂದ ಡಿಸೆಂಬರ್ ಅವಧಿಯಲ್ಲಿ ಲಸಿಕೆ ಕೇಂದ್ರ ಸರ್ಕಾರಕ್ಕೆ ಸಿಗಲಿದೆ ಎಂದು ಮೂಲಗಳು ತಿಳಿಸಿವೆ