30 ಕೋಟಿ ಜನರಿಗೆ ಉಚಿತ ಲಸಿಕೆ

ನವದೆಹಲಿ, ನ.೭- ಕೊರೋನಾ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಭಾರತ್ ಬಯೋಟೆಕ್ ಸಂಸ್ಥೆ ಮುಂದಿನ ವರ್ಷ ಫೆಬ್ರವರಿಯಲ್ಲಿ “ಕೋವಾಕ್ಸಿನ್” ಬಿಡುಗಡೆ ಮಾಡಲು ಮುಂದಾಗಿದ್ದು ಆರಂಭದಲ್ಲಿ ೩೦ ಕೋಟಿ ಮಂದಿಗೆ ಲಸಿಕೆ ಉಚಿತ ವಾಗಿ ಸಿಗಲಿದೆ.

ಲಸಿಕೆ ವಿತರಣೆ ಮಾಡಲು ಆಧಾರ್ ಮಾಹಿತಿಯನ್ನು ಪಡೆಯಲಾಗುತ್ತದೆ ಆದರೆ ಆಧಾರ್ ಸಂಖ್ಯೆ ನಮೂದಿಸುವುದು ಕಡ್ಡಾಯವಲ್ಲ ಯಾವುದೇ ಭಾವಚಿತ್ರವಿರುವ ಗುರುತಿನ ಚೀಟಿ ಇದ್ದರೆ ಸಾಕು ಲಸಿಕೆ ಪಡೆಯಬಹುದಾಗಿದೆ.

ಕೊರೋನಾ ಸೋಂಕಿಗೆ ಲಸಿಕೆ ಪಡೆಯಬೇಕಾದರೆ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸುವ ಅಗತ್ಯವಿಲ್ಲ .
ಮೊದಲ ಹಂತದಲ್ಲಿ ೩೦ ಕೋಟಿ ಮಂದಿಗೆ ಲಸಿಕೆ ಸಿಗಲಿದ್ದು ನಾಲ್ಕು ವಿಭಾಗ ಮಾಡಲಾಗಿದೆ.

ಈ ಪೈಕಿ ವೈದ್ಯರು, ಎಂಬಿಬಿಎಸ್ ವಿದ್ಯಾರ್ಥಿಗಳು, ವೇದಿಕೆಯ ಸೇವೆಯಲ್ಲಿ ನಿರತರಾಗಿರುವ ಸೇರಿದಂತೆ ಕರೋನಾ ವಾರಿಯರ್ ಗಳು ಲಸಿಕೆ ಪಡೆಯಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಹೇಳಿದ್ದಾರೆ.

ಲಸಿಕೆ ಅಭಿವೃದ್ಧಿಗೆ ಭಾರತೀಯ ಔಷಧ ನಿಯಂತ್ರಣಾ ಸಂಸ್ಥೆಯಿಂದ ಅನುಮತಿ ಸಿಕ್ಕ ತಕ್ಷಣ ಲಸಿಕೆ ಉತ್ಪಾದನೆ ಆರಂಭವಾಗಲಿದೆ ಇದಕ್ಕಾಗಿ ಸೂಕ್ತ ವಿತರಣೆ ಸಂಸ್ಕರಣೆ ಸೇರಿದಂತೆ ಇನ್ನಿತರ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ

ಯಾರಾರಿಗೆ ಲಸಿಕೆ:

ಮೊದಲ ಹಂತದಲ್ಲಿ ದೇಶದ ೩೦ ಕೋಟಿ ಜನರಿಗೆ ಕೊರೋನಾ ಲಸಿಕೆಯನ್ನು ನೀಡಲು ಉದ್ದೇಶಿಸಲಾಗಿದ್ದು ಅದರಲ್ಲಿ ನಾಲ್ಕು ಹಂತಗಳನ್ನಾಗಿ ವಿಭಾಗ ಮಾಡಲಾಗಿದೆ.

ಒಂದು ಕೋಟಿಲಸಿಕೆ:
ವೈದ್ಯರನ್ನು ಹೊರತು ಪಡಿಸಿ,ದಾದಿಯರು, ಆಶಾ ಕಾರ್ಯಕರ್ತರು, ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಒಂದು ಕೋಟಿ ಕೆಲಸಕ್ಕೆ ವಿತರಿಸಲು ಉದ್ದೇಶಿಸಲಾಗಿದೆ

ಮುಂಚೂಣಿ ಕಾರ್ಯಕರ್ತರಿಗೆ:

ಕರೋನಾ ಸೋಂಕಿನ ವಿರುದ್ಧ ಹೋರಾಟ ಮಾಡಲು ಮಂಚೂಣಿಯಲ್ಲಿ ಗುರುತಿಸಿಕೊಂಡಿರುವ ಮಂದಿಗೆ ಎರಡು ಕೋಟಿ ಎಲ ಸಿ ಕೆ ನೀಡುವ ಉದ್ದೇಶ ಹೊಂದಲಾಗಿದೆ.ಇದರಲ್ಲಿ ನಗರಸಭೆಯ ನಗರಪಾಲಿಕೆಯ ಸಿಬ್ಬಂದಿಗಳು ಪೊಲೀಸರು ಪೊಲೀಸ್ ಸಿಬ್ಬಂದಿ ಸೇರಿದಂತೆ ಅನೇಕರು ಸೇರಿದ್ದಾರೆ

೬ ಕೋಟಿ ಲಸಿಕೆ:

೫೦ ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ದೇಶದ ೨೬ ಕೋಟಿ ಜನರಿಗೆ ಮೊದಲ ಹಂತದಲ್ಲಿ ಲಸಿಕೆ ಲಭ್ಯವಾಗಲಿದೆ. ೫೦ ವರ್ಷ ಮೇಲ್ಪಟ್ಟ ನಾಗರಿಕರಲ್ಲಿ ಕೊರೊನಾ ಸೋಂಕು ಬೇಗ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಹೀಗಾಗಿ ಅವರಿಗೆ ಲಸಿಕೆ ನೀಡುವ ಉದ್ದೇಶ ಹೊಂದಲಾಗಿದೆ

೧ ಕೋಟಿ ವಿಶೇಷ ಕೆಟಗರಿ:

೫೦ ವರ್ಷ ಒಳಗಿನ ಜನರಿಗೆ ಒಂದು ಕೋಟಿ ಲಸಿಕೆಯನ್ನು ಆರಂಭಿಕ ಹಂತದಲ್ಲಿ ನೀಡಲು ಉದ್ದೇಶಿಸಲಾಗಿದೆ. ಎಲ್ಲ ಗುಂಪುಗಳಿಗೂ ಲಸಿಕೆ ಉಚಿತವಾಗಿ ಸಿಗಲಿದೆ ಈ ನಿಟ್ಟಿನಲ್ಲಿ ಅಗತ್ಯ ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ.

ಕಾರ್ಯಪಡೆ ರಚನೆ:
ಲಸಿಕೆ ಅಭಿವೃದ್ಧಿ ಪಡಿಸಿದ ನಂತರ ಅದನ್ನು ಸಮರ್ಪಕವಾಗಿ ವಿತರಣೆ ಮಾಡುವ ಸಂಬಂಧ ಕೇಂದ್ರ ಸರ್ಕಾರ ಈಗಾಗಲೇ ಕಾರ್ಯಪಡೆಯನ್ನು ರಚನೆ ಮಾಡಿದೆ ಈ ಕಾರ್ಯಪಡೆ ಅಗತ್ಯ ವಿತರಣೆಗೆ ಕ್ರಮ ಕೈಗೊಳ್ಳಲಿದೆ.