3.50 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ


ಚನ್ನಮ್ಮನ ಕಿತ್ತೂರ,ಜ.8: ಗ್ರಾಮದಲ್ಲಿಯ ಕಾಮಗಾರಿಗಳು ಕಳಪೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು ಅದರ ಜೊತೆಯಲ್ಲಿ ನಮ್ಮ-ನಿಮ್ಮೆಲ್ಲರ ಹೆಚ್ಚಿನ ಜವಾಬ್ದಾರಿಯಾಗಿದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ತಾಲೂಕಿನ ದೇಗಾಂವ ಮಾರ್ಗದಿಂದ ದೇಗುಲಹಳ್ಳಿ ಕೂಡುವ ಸಿಸಿ ಮತ್ತು ಡಾಂಬರ ರಸ್ತೆ ಜಲ ಜೀವನ ಮಿಷನ್ 3.50 ಕೋಟಿ ರೂ. ವೆಚ್ಚದ ಪಿಡಬ್ಲೂಡಿ ಇಲಾಖೆಯ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.
ಕಾಮಗಾರಿಗಳು ಗುಣಮಟ್ಟದ್ದಾಗಬೇಕು. ಕಳಪೆ ಏನಾದರೂ ಕಂಡುಬಂದಲ್ಲಿ ಅಂತಹ ಗುತ್ತಿಗೆದಾರರ ಬಿಲ್ಲ ತಡೆಹಿಡಿಯಲಾಗುವುದು. ಈಗಾಗಲೇ ನಮ್ಮ ಸರ್ಕಾರ ಸಾರ್ವಜನಿಕರಿಗೆ ಸಾಕಷ್ಟು ಸೌಲಭ್ಯ ಒದಗಿಸಿದೆ. ಇವುಗಳನ್ನು ಸರ್ಕಾರಿ ಅಧಿಕಾರಿಗಳು ಬಡವರ ಪ್ರತಿ ಮನೆಗಳಿಗೆ ತಲುಪಿಸುವ ಕೆಲಸ ಮಾಡಬೇಕೆಂದು ಅಧಿಕಾರಿಗಳನ್ನು ಎಚ್ಚರಿಸಿದರು. ನಂತರ ಗ್ರಾಮದಲ್ಲಿಯ ವಿವಿಧ ಕಾಮಗಾರಿಗಳನ್ನು ವಿಕ್ಷೀಸಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ತಕ್ಷಣವೇ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಕರೆ ಮಾಡಿ ಸ್ಥಳದಲ್ಲಿ ಅವರ ಸಮಸ್ಯೆ ಪರಿಹರಿಸಿದರು.
ಈ ವೇಳೆ ಗ್ರಾ.ಪಂ. ಅಧ್ಯಕ್ಷೆ ಅನುಶ್ರೀ ಗಳಗಿ, ಉಳವಪ್ಪ ಉಳ್ಳಾಗಡ್ಡಿ, ವಿವೇಕ ದುಗ್ಗಾಣಿ, ಭರತ ಗಂದಿಗವಾಡ, ಮೌನೇಶ ಕಮ್ಮಾರ, ಶಂಕರ ನರಗುಂದ, ಮಂಜುನಾಥ ಮುಪ್ಪಿನಮಠ, ಶಂಕರ ಗಳಗಿ, ಪರಶುರಾಮ ಪತ್ತಾರ, ಪ್ರಕಾಶ ಕಡತಾಳ, ರಾಮಚಂದ್ರ ಪತ್ತಾರ, ರುದ್ರಪ್ಪ ಕಲ್ಲಿ, ಕಲ್ಲಪ್ಪ ಕಾಂದ್ರೋಳ್ಳಿ, ಪಿಡಿಓ ವಿನಯಕುಮಾರ ಕೊರವಿ, ಅಭೀಯಂತರರು ಜಿ.ಎಸ್.ಪಾಟೀಲ, ಗುತ್ತಿಗೆದಾರ ನಂದಕಿಶೋರ ವಾಗರವಾಡೆ, ಪತ್ರಕರ್ತ ಕಲ್ಲಪ್ಪ ಅಗಸಿಮನಿ, ರಮೇಶ ಉಗರಖೋಡ, ರುದ್ರಪ್ಪ ಬೆಂಡಿಗೇರಿ ಹಾಗೂ ಗ್ರಾಮಸ್ಥರಿದ್ದರು.