3 ಸಾವಿರ ವಿದ್ಯಾರ್ಥಿನಿಯರು ಇದ್ದರು  ಕಾಲೇಜಿನಲ್ಲಿ ಕ್ಯಾಂಟೀನ್ ಇಲ್ಲ

 ಚಿತ್ರದುರ್ಗ.ಜು.೧೩; ನಗರದ  ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ರಸ್ತೆ ಬದಿಯಲ್ಲೇ ತಿಂದು ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹಳಷ್ಟು ವಿದ್ಯಾರ್ಥಿನಿಯರು ಗ್ರಾಮೀಣ ಪ್ರದೇಶದಿಂದ, ಬಸ್ಸುಗಳಲ್ಲಿ ಸಂಚರಿಸಿ ಕಾಲೇಜಿಗೆ ಬಂದು, ವಿದ್ಯಾಭ್ಯಾಸ ಕಲಿತು, ಮಧ್ಯಾಹ್ನದ ಊಟಕ್ಕೆ ರಸ್ತೆಯ ಮಧ್ಯೆ ಪರದಾಡುವ ದೃಶ್ಯ ಸಾಮಾನ್ಯವಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ಅಪಾದಿಸಿದ್ದಾರೆ.
ಹಾಸ್ಟಲ್‌ನಿಂದ ಬರುವ ವಿದ್ಯಾರ್ಥಿನಿಯರು ಸಹ ಸರಿಯಾಗಿ ಊಟ, ತಿಂಡಿ ಮಾಡದೆ ಅವಸರವಸರವಾಗಿ ನಡೆದುಕೊಂಡು, ಕಾಲೇಜಿಗೆ ಬಂದ ನಂತರ, ಹೊಟ್ಟೆ ಹಸಿದಾಗ, ರಸ್ತೆಬದಿಯಲ್ಲಿ ಹತ್ತು ರೂಪಾಯಿಗೆ 8 ಪಾನಿಪುರಿ ತಿಂದು ಬದುಕುತ್ತಿದ್ದಾರೆ. ಈ ಮಕ್ಕಳಿಗೆ 10 ರಿಂದ 20 ರೂಪಾಯಿಗೆ ಯಾವುದಾದರೂ ಆರೋಗ್ಯಪೂರ್ಣವಾದ ಆಹಾರ ನೀಡುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆಯವರು ಮಾಡಿದ್ದರೆ, ಅವರ ಆರೋಗ್ಯ ಸುಧಾರಿಸುತ್ತಿದ್ದು, ದೇಶಕ್ಕೂ ಒಳ್ಳೆಯ ಪ್ರಜೆಗಳು ದೊರಕುತ್ತಿದ್ದರು ಎಂದಿದ್ದಾರೆ. ಇಂದಿರಾ ಕ್ಯಾಂಟೀನ್ ದೂರ ಇರುವುದರಿಂದ, ಮಕ್ಕಳಿಗೆ ಅಲ್ಲಿ ಹೋಗಿ ಊಟ ತಿಂಡಿ ಮಾಡುವುದು ಸಾಧ್ಯವಾಗದು. ಕ್ಯಾಂಟೀನ್ ಆಹಾರವನ್ನಾದರೂ ಮಕ್ಕಳಿಗೆ ತಂದು ಒದಗಿಸಿದ್ದರೆ, 5 ರೂಪಾಯಿಗೆ ಬದಲಾಗಿ ಇವರು 10ರೂ ಕೊಡಲು ಸಿದ್ಧರು. ಮಕ್ಕಳು ಹತ್ತು ರುಪಾಯಿಗೆ 8 ಪಾನಿಪುರಿ ತಿಂದು, ಸಂಜೆ ತನಕ ಹಸಿವಿನಿಂದ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಾನಿಪುರಿ ಅಂಗಡಿಗಳನ್ನು ಸಹ ಕಾಲೇಜ್ ಹತ್ತಿರ ಇಡಲು ಅವಕಾಶವಿಲ್ಲದಿರುವುದರಿಂದ, ಒಂದೇ ಒಂದು ತಳ್ಳುವ ಗಾಡಿ ಪಾನೀಪುರಿ ಅಂಗಡಿಯ ಮುಂದೆ, 20ರಿಂದ 30 ವಿದ್ಯಾರ್ಥಿನಿಯರು ಮುಗಿಬಿದ್ದು, ಪಾನಿಪೂರಿ ತಿನ್ನುವ ದೃಶ್ಯ ಸಾಮಾನ್ಯವಾಗಿದೆ ಆರೋಪಿಸಿದ್ದಾರೆ. ಪಾನಿಪುರಿ ನೀಡುವ ವ್ಯಕ್ತಿಯೂ ಸಹ, ಅವಸರ ಅವಸರವಾಗಿ ಇವರಿಗೆ, ತಟ್ಟೆಗಳನ್ನು ಸರಿಯಾಗಿ ತೊಳೆಯದೆ, ಪಾನಿ ನೀಡಿ, ಸ್ವಚ್ಛವಾದ ನೀರನ್ನು ಸಹ ನೀಡದೆ, ಹಣ ಗಳಿಕೆಯೇ ಮುಖ್ಯ ಉದ್ದೇಶವಿಟ್ಟುಕೊಂಡು, ವ್ಯಾಪಾರ ಮಾಡಿ ಹೋಗುತ್ತಿದ್ದಾರೆ. ವ್ಯಾಪಾರಸ್ಥರು ಈ ಕಾಲೇಜು ಮುಂದೆ, ಗಾಡಿಗಳಲ್ಲಿ ತಂದು, ಸಿಕ್ಕಸಿಕ್ಕ ಜಂಕ್ ಫುಡ್‌ಗಳನ್ನೆಲ್ಲ ಮಾರಿ ಹೋಗುತ್ತಿದ್ದಾರೆ. ಏನೆಲ್ಲ ತಿಂಡಿ ಕೊಟ್ಟರು, ದೇವರ ಪ್ರಸಾದ ಎಂದು ತಿನ್ನುತ್ತಿರುವ ವಿದ್ಯಾರ್ಥಿನಿಯರಿಗೆ, ತಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಅರಿವಿಲ್ಲ. ಪೌಷ್ಟಿಕಾಂಶಗಳಿಲ್ಲದ ಆಹಾರ ಸೇವನೆಯಿಂದ, ಹೆಣ್ಣುಮಕ್ಕಳ ಜೀವನ ಯಾವ ರೀತಿ ಕೆಡುತ್ತದೆ ಎಂಬುದರ ಅರಿವಿಲ್ಲದೆ ಆಹಾರ ಸೇವಿಸುತ್ತಿದ್ದಾರೆ ಆರೋಪಿಸಿದ್ದಾರೆ. ಕೆಲವು ಕಾಲೇಜ್‌ಗಳಲ್ಲಿ ಮಕ್ಕಳಿಗೆ ಮನೆಯಲ್ಲಿ ಮಾಡಿದ ತಟ್ಟೆ ಇಡ್ಲಿ ಚಟ್ನಿಯನ್ನು, ಕಡಿಮೆ ವೆಚ್ಚದಲ್ಲಿ ಒದಗಿಸುತ್ತಿರುವಂಥ ಸಾಕಷ್ಟು ಮಾಡಿರುವ ಉದಾಹರಣೆಗಳನ್ನು ಚಿತ್ರದುರ್ಗದಲ್ಲಿ ನೋಡಬಹುದು. ಅದೇ ರೀತಿ ಈ ಕಾಲೇಜು ಆವರಣದ ಒಳಗೆ 1 ಕಟ್ಟಡ ನಿರ್ಮಾಣ ಮಾಡಿ, ಅದರಲ್ಲಿ ವಿದ್ಯಾರ್ಥಿಗಳಿಗೆ, ಕುಳಿತುಕೊಂಡು ಆಹಾರ ಸೇವಿಸುವಂತ ವ್ಯವಸ್ಥೆ ಮಾಡಬಹುದು. ಇದರಿಂದ 3 ಸಾವಿರ ವಿದ್ಯಾರ್ಥಿನಿಯರ ಆರೋಗ್ಯ ನಿರ್ಮಿಸಿದಂತಾಗುತ್ತದೆ ಎಂದಿದ್ದಾರೆ.ಗ್ರಾಮೀಣ ವಿದ್ಯಾರ್ಥಿನಿಯರು ಬಡತನದಲ್ಲೇ ಕಾಲೇಜಿಗೆ ಬರುತ್ತಾರೆ, ಜಂಕ್ ಫುಡ್ ತಿಂದು ದೇಹದ ಶಕ್ತಿಯನ್ನು ಕ್ಷೀಣಿಸಿ ಕೊಕೊಳ್ಳುತ್ತಿದ್ದಾರೆ. ಅವರಿಗೆÀ ರಕ್ತಹೀನತೆ, ಕಡಿಮೆ ತೂಕ, ಅಪೌಷ್ಟಿಕತೆ ಎದ್ದು ಕಾಣುತ್ತಿದೆ. ಕೆಲವೊಂದು ಮಕ್ಕಳು ನಾಲಗೆ ರುಚಿಗೋಸ್ಕರ ಜಂಕ್ ಫುಡ್‌ಗಳಿಗೆ ಮಾರು ಹೋಗಿ, ಫ್ರೆöÊಡ್ ರೈಸ್, ಎಗ್ ಫ್ರೆöÊಡ್ ರೈಸ್, ಗೋಬಿ ಮಂಚೂರಿ, ಪಾನಿಪೂರಿ ಇಂತಹÀ ಆಹಾರವನ್ನೇ ಸೇವಿಸುತ್ತಿದ್ದು, ಮನೆ ಆಹಾರ ಬೇಡವೆನ್ನುತ್ತಿದ್ದಾರೆ ಎಂದರು.ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಮಂಡಕ್ಕಿ, ಐಸ್ಕಿçÃಮ್, ಗೋಬಿ ಮಂಚೂರಿ, ಪಾನಿಪುರಿ, ಸೇವನೆ ಬೆಳೆಯುವ ಮಕ್ಕಳಿಗೆ ಸೂಕ್ತವಾದುದಲ್ಲ. ದಿನನಿತ್ಯ ಫಾಸ್ಟ್ ಫುಡ್‌ಗಳನ್ನೇ ಸೇವಿಸುತ್ತಿದ್ದು, ಅಂತಹ ಮಕ್ಕಳು ಮುಂದೊAದು ದಿನ ಮನೆಯ ಊಟಕ್ಕೆ ಹೊಂದಿಕೊಳ್ಳಲಾರದೆ, ಬಳಲುವಂಥಹ ದೃಶ್ಯ ಸಾಮಾನ್ಯವಾಗುತ್ತದೆ ಎಂದರು. ಕಾಲೇಜಿನ ಆಡಳಿತ ಮಂಡಳಿ, ಇದರ ಬಗ್ಗೆ ಚಿಂತನೆ ಮಾಡಿ, ಮಕ್ಕಳಿಗೆ ಒಳ್ಳೆಯ ಆಹಾರ ಸಿಗುವಂತೆ ವ್ಯವಸ್ಥೆ ಮಾಡಬೇಕಾಗಿದೆ ಎಂದು ಪತ್ರಿಕೆ ಮುಖಾಂತರ ವಿನಂತಿಸಿಕೊAಡಿದ್ದಾರೆ. ಆರೋಗ್ಯಪೂರ್ಣವಾದ ಆಹಾರಸೇವನೆ ಮಕ್ಕಳ ಹಕ್ಕು, ಅದೇ ಸಿದ್ಧಾಂತದ ಮೇಲೆ ಬಿಸಿಯೂಟ ನೀಡಿ, ಮಕ್ಕಳನ್ನು ಶಿಕ್ಷಣ ಪಡೆಯಲು ಪ್ರೋತ್ಸಾಹಿಸುತ್ತಿದ್ದಾರೆ. ಕೊನೆಪಕ್ಷ ಬಿಸಿಯೂಟವನ್ನಾದರು ಕಾಲೇಜು ಮಕ್ಕಳಿಗೆ ವಿಸ್ತರಿಸುವುದನ್ನ ಮಾಡಬಹುದು. ಇದರಿಂದ ತೊಂದರೆಯೇನಿಲ್ಲ. ಬಿಸಿಯೂಟ ತಯಾರು ಮಾಡುವಂಥ ಸಿಬ್ಬದಿ ವರ್ಗದವರಿಂದಲೇ, ಈ ಮಕ್ಕಳಿಗೂ ಸಹ ಒಂದಿಷ್ಟು ಬಿಸಿ ಊಟದ ವ್ಯವಸ್ಥೆ ಮಾಡಿ, ಹಣದ ಖರ್ಚನ್ನ ಮಕ್ಕಳಿಂದಲೇ ವಸೂಲಿ ಮಾಡಿಕೊಳ್ಳಬಹುದು ಎಂದರು. ಮನಸ್ಸಿದ್ದರೆ ಮಾರ್ಗ ಎಂಬAತೆ ಮಕ್ಕಳ ಆರೋಗ್ಯಕ್ಕಾಗಿ ಸರ್ಕಾರ, ನಗರಾಡಳಿತ, ಶಿಕ್ಷಣ ಇಲಾಖೆ, ಕಾಲೇಜು ಆಡಳಿತ ಮಂಡಳಿ, ಆದಷ್ಟು ಶೀಘ್ರವಾಗಿ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು, ಹಣ್ಣು ಹಂಪಲಗಳನ್ನು ಒದಗಿಸುವಂತ ವ್ಯವಸ್ಥೆ ಮಾಡಬೇಕೆಂದು ವಿನಂತಿಸಿಕೂAಡಿದ್ದಾರೆ. ರಸ್ತೆ ಬದಿಯಲ್ಲಿ ನಿಂತು ಊಟ ಮಾಡುವ ವಿದ್ಯಾರ್ಥಿನಿಯರಿಗೆ ಹುಡುಗರ ಕಾಟ ಹೆಚ್ಚಾಗಿ, ಅವರನ್ನೂ ಕಾಯಲು ಪೊಲೀಸ್ ವ್ಯವಸ್ಥೆ ಮಾಡಬೇಕಾಗಿ ಬಂದಿದೆ, ಹೆಣ್ಣು ಮಕ್ಕಳು ಓದುತ್ತಿರುವ ಮಕ್ಕಳಿಗೆ, ರಸ್ತೆ ಬದಿಯಲ್ಲಿ ಆಹಾರ ಸೇವನೆ ಮಾಡುವುದಕ್ಕಿಂತ, ಕಾಲೇಜಿನ ಆವರದೊಳಗೆ ಅಥವಾ ಕಟ್ಟಡದೊಳಗೆ ಮಧ್ಯಾಹ್ನದ ಊಟದ, ಬೆಳಿಗ್ಗೆ ತಿಂಡಿಯ ವ್ಯವಸ್ಥೆಯನ್ನು ಮಾಡಿಕೊಡಲು ಆಗ್ರಹಿಸಿದ್ದಾರೆ.