3 ಸಾವಿರಕ್ಕಿಳಿದ ಸೋಂಕು

ಬೆಂಗಳೂರು, ಜೂ.೩- ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹತೋಟಿಗೆ ಬಂದಿದ್ದು, ಸದ್ಯ ಗುರುವಾರ ೩,೬೦೨ ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಮಾತ್ರ ವರದಿಯಾಗಿವೆ.
ನಗರದ ಮಹಾದೇವಪುರ ೪೮೩ ಹೆಚ್ಚಿನ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿವೆ.ಉಳಿದ ಬೊಮ್ಮನಹಳ್ಳಿ ೩೯೬, ದಾಸರಹಳ್ಳಿ ೧೦೭, ಬೆಂಗಳೂರು ಪೂರ್ವ ೪೫೫, ಆರ್.ಆರ್ ನಗರ ೨೭೦, ಬೆಂಗಳೂರು ದಕ್ಷಿಣ ೩೧೯, ಬೆಂಗಳೂರು ಪಶ್ಚಿಮ ೨೭೧, ಯಲಹಂಕದಲ್ಲಿ ೨೬೭ ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಸದ್ಯ ಬೆಂಗಳೂರು ನಗರದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.೮.೮೬ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ ಶೇ. ೫.೧೩ ಇದೆ ಎಂದು ತಿಳಿದುಬಂದಿದೆ.
ಕಳೆದ ೨೪ ಗಂಟೆಗಳಲ್ಲಿ ನಗರದಲ್ಲಿ ೪,೦೯೫ ಪ್ರಕರಣಗಳು ಪತ್ತೆಯಾಗಿದ್ದು, ೩೦೭ ಮಂದಿ ಮೃತಪಟ್ಟಿದ್ದರು. ಪ್ರಸ್ತುತ ನಗರದಲ್ಲಿ ೧,೩೮,೮೭೦ ಸಕ್ರಿಯ ಪ್ರಕರಣಗಳಿವೆ. ಜೂನ್ ೧ರಂದು ೬೫,೪೮೦ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದೆ.