3 ಮಕ್ಕಳಿಗೆ ಚೀನಾ ಸಮ್ಮತಿ

ಬೀಜಿಂಗ್, ಮೇ.೩೧- ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಚೀನಾ ಇತ್ತೀಚೆಗೆ ಜನಸಂಖ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ದಂಪತಿ ಎರಡು ಮಕ್ಕಳನ್ನು ಹೊಂದುವುದು ಕಡ್ಡಾಯ ಎನ್ನುವ ನಿಯಮ ಮುರಿದು ೩ ಮಕ್ಕಳು ಪಡೆಯಲು ದಂಪತಿಗೆ ಅವಕಾಶ ಮಾಡಿಕೊಟ್ಟಿದೆ.
ಚೀನಾದಲ್ಲಿ ಇತ್ತೀಚಿನ ದಿನಗಳಲ್ಲಿ ಜನ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳವಳಗೊಂಡಿರುವ ಚೀನಾ ಇಂಥದೊಂದು ಕ್ರಮ ಕೈಗೊಂಡಿದೆ.
ಇದುವರೆಗೂ ಎರಡು ಮಕ್ಕಳನ್ನು ದಂಪತಿ ಹೊಂದಬಹುದು ಎನ್ನುವ ಜಾರಿ ಮಾಡಿತ್ತು.ಇದೀಗ ಆ ನಿಯಮ ಬದಿಗೆ ಸರಿಸಿ ಮೂರು ಮಕ್ಕಳನ್ನು ಹೊಂದಬಹುದು ಎಂದು ಹೇಳಿದೆ.
ಚೀನಾದಲ್ಲಿ ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಆತಂಕ ವ್ಯಕ್ತಪಡಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಪಕ್ಷದ ಪಾಲಿಟ್ ಬ್ಯೂರೋ ಸಭಯಲ್ಲಿ ಚರ್ಚೆ ನಡೆಸಿದ ಬಳಿಕ ಮೂರು ಮಕ್ಕಳು ಹೊಂದಲು ದಂಪತಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾದ್ಯಮ ವರದಿ ಮಾಡಿದೆ.
ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಸುವ ಜನಸಂಖ್ಯೆಯ ಗಣತಿಯಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ಚೀನಾದ ಜನಸಂಖ್ಯೆ ಗಣನೀಯವಾಗಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಜನಸಂಖ್ಯೆ ಹೆಚ್ಚಳ ಮಾಡುವ ಉದ್ದೇಶದಿಂದ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ಕೂಡ ತಿಳಿಸಲಾಗಿದೆ.
ಜನಸಂಖ್ಯೆಯನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಚೀನಾದ ದಂಪತಿಗಳು ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಡಲಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಹತ್ತು ವರ್ಷಗಳ ಅವಧಿಯಲ್ಲಿ ಚೀನಾದ ಜನಸಂಖ್ಯೆ ೦.೫೩ರಷ್ಟು ಮಾತ್ರ ದಾಖಲಾಗಿದ್ದು ೨೦೦೦ ಮತ್ತು ೨೦೧೦ರ ಅವಧಿಯಲ್ಲಿನ ಸಂಖ್ಯೆಗಿಂತ ಕಡಿಮೆ ಜನಸಂಖ್ಯೆ ದಾಖಲಾಗಿದೆ. ಸದ್ಯ ಚೀನಾದ ಜನಸಂಖ್ಯೆ ೧೪೧ ಕೋಟಿ ದಾಟಿದ್ದು ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ ಆನಂತರ ಭಾರತ ಎರಡನೇ ಸ್ಥಾನದಲ್ಲಿದೆ. ಕೆಲವೇ ವರ್ಷಗಳಲ್ಲಿ ಜನಸಂಖ್ಯೆಯಲ್ಲಿ ಭಾರತ ,ಚೀನಾವನ್ನು ಹಿಂದಿಕ್ಕಲಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಮೂರು ಮಕ್ಕಳನ್ನು ದಂಪತಿಗೆ ಅವಕಾಶ ಕಲ್ಪಿಸಲಾಗಿದೆ.