3 ಬಾಕ್ಸ್ ಒರಿಜನಲ್ ಚಾಯ್ಸ್ ಮದ್ಯ ಜಪ್ತಿ

ಕಲಬುರಗಿ,ಏ.24-ಅಬಕಾರಿ ಇಲಾಖೆ ಅಧಿಕಾರಿಗಳು ಅಫಜಲಪುರ ಮತಕ್ಷೇತ್ರದ ಹಾಗರಗುಂಡಿ ಗ್ರಾಮದ ಶ್ರೀಮಂತ ಬಾಬು ಕೋಟಬು ಎಂಬುವವ ಚಹಾ ಅಂಗಡಿಯ ಮೇಲೆ ದಾಳಿ ನಡೆಸಿ 3 ಬಾಕ್ಸ್ ಒರಿಜನಲ್ ಚಾಯ್ಸ್ ಇದ್ದ 25.990 ಲೀಟರ್ ಮದ್ಯ ಜಪ್ತಿ ಮಾಡಿದ್ದಾರೆ.
ಬೆಳಗಾವಿ ಕೇಂದ್ರ ಸ್ಥಾನದ ಅಪರ ಅಬಕಾರಿ ಆಯುಕ್ತರು, ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ, ಅಬಕಾರಿ ಉಪ ಆಯುಕ್ತರ ಆದೇಶದಂತೆ ಡಿಸಿಇಐಬಿ ಅಬಕಾರಿ ನಿರೀಕ್ಷರು ಈ ದಾಳಿ ನಡೆಸಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.