3 ದಿನದಲ್ಲಿ ಎಲ್ಲ ರಾಜ್ಯಗಳಿಗೆ 4 ಲಕ್ಷ ಡೋಸ್ ಲಸಿಕೆ ಪೂರೈಕೆ

ನವದೆಹಲಿ, ಮೇ 29- ರಾಜ್ಯಗಳಲ್ಲಿ ಪ್ರಸ್ತುತ 1.82 ಕೋಟಿ ಡೋಸ್ ಲಸಿಕೆ ಇದೆ. ಮೂರು ದಿನಗಳಲ್ಲಿ ಇನ್ನೂ ನಾಲ್ಕು ಲಕ್ಷ ಡೋಸ್ ಲಸಿಕೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಲಸಿಕೆ‌ ಅಭಾವ ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ಇದುವರೆಗೂ ಕೇಂದ್ರ ಸರ್ಕಾರ ಉಚಿತವಾಗಿ ಹಾಗೂ ನೇರವಾಗಿ ರಾಜ್ಯಗಳೇ ಖರೀದಿಸುವ ವಿಭಾಗದಲ್ಲಿ 22.77 ಕೋಟಿ ಡೋಸ್ ಗಳಿಗೂ ಹೆಚ್ಚಿನ ಲಸಿಕೆಗನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದೆ. ಈ ಪೈಕಿ ವ್ಯರ್ಥವಾಗಿರುವುದು ಸೇರಿ 20,80,09,397 ಡೋಸ್ ಗಳಷ್ಟು ಲಸಿಕೆಯನ್ನು ಬಳಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೋವಿಡ್-19 ಲಸಿಕೆ ಕಾರ್ಯತಂತ್ರ ಮೂರನೇ ಹಂತ ಮೇ.1 ರಿಂದ ಜಾರಿಗೆ ಬಂದಿದೆ. ಕೇಂದ್ರ ಔಷಧಪ್ರಯೋಗಾಲಯ ಅನುಮೋದನೆ ನೀಡಿರುವ ಲಸಿಕೆ ಡೋಸ್ ಗಳ ಪೈಕಿ ಶೇ.50 ರಷ್ಟನ್ನು ಪ್ರತಿ ತಿಂಗಳು ಸರ್ಕಾರ ಯಾವುದೇ ತಯಾರಕರಿಂದ ಖರೀದಿಸುವುದಕ್ಕೆ ಅನುಮತಿ ಇದೆ ಎಂದು ಹೇಳಿದೆ.