3 ದಶಕದ ಕನಸು: ವಸತಿ ನಿಲಯ ಲೋಕಾರ್ಪಣೆ ಮಾಡಿದ ಶಾಸಕ ವೆಂಕಟರೆಡ್ಡಿ ಮುದ್ನಾಳ

ಯಾದಗಿರಿ :ಎ.21: ದೋರನಹಳ್ಳಿ ಬಿಸಿಎಂ ವಸತಿ ನಿಲಯಇಂದು ಲೋಕಾರ್ಪಣೆಗೊಳ್ಳುತ್ತಿರುವುದು ಸಂತೋಷದ ವಿಷಯ. ಇದು ಮೂರು ದಶಕಗಳ ಕನಸು ಇಂದು ನನಸಾಗಿ ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗಿದೆಎಂದುಕ್ಷೇತ್ರದ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಹೇಳಿದರು.
ಜಿಲ್ಲಾ ಪಂಚಾಯತಯಾದಗಿರಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯಾದಗಿರಿಜಿಲ್ಲೆಯ ಶಹಾಪುರತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಉದ್ಘಾಟನೆ ಮಾಡಿ ಮಾತನಾಡಿದರು.
ಇಂದಿನ ಮಕ್ಕಳಿಗೆ ಪಾಲಕರು ಒಳ್ಳೆಯ ಸಂಸ್ಕಾರ ಕಲಿಸಲು ಮೊದಲು ಮುಂದಾದಾಗ ಮಾತ್ರ ಮಕ್ಕಳು ಸುಂದರವಾದ ಸಮಾಜಕಟ್ಟುತ್ತಾರೆಎಂದು ಹೇಳಿದರು.ಜಿಲ್ಲಾ ಪಂಚಾಯತಿಯಅಧ್ಯಕ್ಷ ಬಸನಗೌಡ ಪಾಟೀಲ್‍ಯಡಿಯಾಪುರ ಮಾತನಾಡಿ 1.99 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಬಿಸಿಎಂ ವಸತಿ ನಿಲಯವುಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅತ್ಯಂತಅನುಕೂಲಕರವಾಗಿದೆ.ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎನ್ನುವುದೇ ನಮ್ಮೆಲ್ಲರಆಶಯಎಂದು ಜಿ.ಪಂ.ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪೂರ ಹೇಳಿದರು.
ಮೂವತ್ತು ವರ್ಷಗಳಿಂದ ದೋರನಹಳ್ಳಿ ಬಿಸಿಎಂ ವಸತಿ ನಿಲಯವು ಅನೇಕ ತೊಂದರೆಗಳು ಅನುಭವಿಸಿ ಬಾಡಿಗೆಯಲ್ಲಿ ನಡಿಸಿಕೊಂಡು ಬಂದಿದೆ.ಇದೀಗ ಶಾಸಕರ ಪೆÇ್ರೀತ್ಸಾಹದಿಂದ ಮೂರುದಶಕಗಳ ಕನಸು ನನಸಾಗಿ ಗ್ರಾಮೀಣ ಪ್ರದೇಶದ ಮಕ್ಕಳ ಓದಿಗೆ ತುಂಬಾ ಅನುಕೂಲವಾಗಿದೆಎಂದುಗ್ರಾಮದವರು ಹರ್ಷವ್ಯಕ್ತ ಪಡಿಸಿದರು.
ಯಾದಗಿರಿಯ ನಗರಾಭಿವೃದ್ಧಿ ಪ್ರಾಧಿಕಾರಅಧ್ಯಕ್ಷ ಬಸವರಾಜಎಸ್.ಚಂಡ್ರಿಕಿ, ತಾ.ಪಂ. ಅಧ್ಯಕ್ಷೆ ಶ್ರೀಮತಿ ಭೀಮವ್ವ ಮಲ್ಲೇಶಪ್ಪ ಅಚೋಲಾ, ಯಾದಗಿರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಅಧಿಕಾರಿ ಪ್ರಭುದೊರೆ, ಯಾದಗಿರಿ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕಿರಣ್ ಹೂಗಾರ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶರಣಪ್ಪ ಬಳಬಟ್ಟಿ, ಕಾಂಗ್ರೇಸ್ ಯುವ ಮುಖಂಡ ನೀಜಗುಣ ಪೂಜಾರಿ, ಗ್ರಾ.ಪಂ.ಅಧ್ಯಕ್ಷ ಹಣಮಂತ ಶಹಾಪುರ ಹಾಗೂ ಗ್ರಾಮದ ಷಣ್ಮುಖಪ್ಪ ಕಕ್ಕೇರಿ, ಪ್ರದೀಪ ಸಾಣಿ, ತಿಪ್ಪಣ್ಣ ಆಂದೇಲಿ, ಶರಣು ಕಸನ್, ಹೈಯಾಳಪ್ಪ ಗುಂಟನೂರು, ಜಟ್ಟೇಪ್ಪ ಬಿರಾಳ, ದೊಡ್ಡಪ್ಪ ದೇಸಾಯಿ, ಮಲ್ಲಿಕಾರ್ಜುನ ಸಗರ್ ಮುಂತಾದವರಿದ್ದರು.
ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಪಂಡಿತ ನಿಂಬೂರು ನಿರೂಪಿಸಿದರು. ಶಾಲಾ ಮಕ್ಕಳು ಪ್ರಾರ್ಥಿಸಿದರು.