3 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಗುತ್ತೇದಾರ ಗುದ್ದಲಿ ಪೂಜೆ

ಆಳಂದ:ಎ.16: ಪಟ್ಟಣದಿಂದ ಕೊರಳ್ಳಿ ಕ್ರಾಸ್ ಮೂಲಕ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಗುದ್ದಲಿ ಪೂಜೆ ನೇರವೇರಿಸಿದರು.

ಇತ್ತೀಚೆಗೆ ಕೊರಳ್ಳಿ ಕ್ರಾಸ್‍ನಿಂದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯವರೆಗಿನ 3 ಕೀ.ಮೀ ಉದ್ದದ 3 ಕೋ. ರೂ. ವೆಚ್ಚದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆಯ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕೊರಳ್ಳಿ ಕ್ರಾಸ್ ಹತ್ತಿರ ಸರ್ಕಾರದ ಬೇಕಾದಷ್ಟು ಜಮೀನಿದೆ ಮುಂದೆ ಬರಲಿರುವ ಹಲವಾರು ಯೋಜನೆಗಳು ಇಲ್ಲಿಯೇ ಆರಂಭವಾಗುತ್ತವೆ ಭವಿಷ್ಯದ ದೃಷ್ಟಿಯಿಂದ ಈ ಸ್ಥಳಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವುದು ನಮ್ಮ ಅದ್ಯತೆಯಾಗಿದೆ ಈ ನಿಟ್ಟಿನಲ್ಲಿ ರಸ್ತೆ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಈ ಪ್ರದೇಶವು ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆ, ಮೋರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಸೇರಿದಂತೆ ಹಲವಾರು ಶೈಕ್ಷಣಿಕ ಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸುತ್ತದೆ ಈ ರಸ್ತೆಯ ನಿರ್ಮಾಣದಿಂದ ಆಳಂದ ಪಟ್ಟಣಕ್ಕೆ ಹೋಗಿ ಬರಲು ಸರಳವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಗುತ್ತೇದಾರ, ರಾಜಶೇಖರ ಮಲಶೆಟ್ಟಿ, ಮಲ್ಲಿಕಾರ್ಜುನ ಕಂದಗೂಳೆ, ಪುರಸಭೆ ಉಪಾಧ್ಯಕ್ಷ ಚಂದ್ರಕಾಂತ ಹತ್ತರಕಿ ಸೇರಿದಂತೆ ಇತರರು ಇದ್ದರು.