3ನೇ ಬಾರಿಗೆ ಘೋಷಣೆಯಾದ ಬಿ.ಎಸ್. ಎಸ್. ಕೆ ಚುನಾವಣೆ: ಏ.6ಕ್ಕೆ ಮತದಾನ

ಬೀದರ:ಮಾ.24: ಬೀದರ ಸಹಕಾರ ಸಕ್ಕರೆ ಕಾರ್ಖಾನೆ 13 ಜನ ಸದಸ್ಯರ ಸ್ಥಾನಕ್ಕೆ ಇದೀಗ ಮತ್ತೆ ಮೂರನೇ ಬಾರಿಗೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಬಿಜೆಪಿ ಸದಸ್ಯರ ಎರಡು ಬಣಗಳ ಮಧ್ಯೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿರುವುದು ವಿಶೇಷವಾಗಿದೆ.

ಏ.6ರಂದು ಚುನಾವಣೆ ದಿನಾಂಕ ನಿಗದಿ ಮಾಡಲಾಗಿದೆ. ಒಟ್ಟು 13 ಸ್ಥಾನಕ್ಕೆಚುನಾವಣೆ ನಡೆಯಲ್ಲಿದ್ದು, ಸಾಮಾನ್ಯವರ್ಗ 5, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟಪಂಗಡಕ್ಕೆ ಸೇರಿದ ಸದಸ್ಯರಿಗೆ ತಲಾ ಒಂದುಸ್ಥಾನ, ಮಹಿಳಾ ಸದಸ್ಯರಿಗೆ 2, ಪ್ರವರ್ಗ(ಎ) 1, ಪ್ರ ವರ್ಗ(ಬಿ) 1, ಬ-ವರ್ಗದ ಕಬ್ಬು ಬೆಳೆಗಾರರಲ್ಲದ ಅರ್ಹ ಸದಸ್ಯರ 1,ಸಿ ವರ್ಗದ ಸಹಕಾರ ಸಂಘದ 1 ಸದಸ್ಯರಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ.ಚುನಾವಣಾ ವೇಳಾಪಟ್ಟಿ: ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳು ಮಾ.29ರವರೆಗೆ ಕಾರ್ಖಾನೆ ಆವರಣದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ.
ಮಾ.30ರಂದು ನಾಮಪತ್ರಗಳ ಪರಿಶೀಲನೆನಡೆಯಲ್ಲಿದೆ. ಮಾ.31ರಂದು ನಾಮಪತ್ರಹಿಂದೆ ತೆಗೆದುಕೊಳ್ಳಲು ಅವಕಾಶನೀಡಲಾಗಿದೆ. ಅದೇ ದಿನ ಚುನಾವಣೆಯ ಕಣದಲ್ಲಿ ಉಳಿಯುವ ಅಂತಿಮಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ನಡೆಯಲಿದೆ.ಏ.6ರಂದು ಕಾರ್ಖಾನೆಯ ಆವರಣದಲ್ಲಿನಸರ್ಕಾರಿ ಶಾಲೆಯಲ್ಲಿ ಮತದಾನನಡೆಯಲಿದೆ. ಸಂಜೆ 4 ಗಂಟೆಯ ನಂತರ ಮತ ಏಣಿಕೆ ಕಾರ್ಯ ನಡೆಯಲಿದೆ ಎಂದು ತಹಶೀಲ್ದಾರ್‌ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

ಬಿಜೆಪಿ ಬಣಗಳಲ್ಲೇ ಸ್ಪರ್ಧೆ: ಕಳೆದಎರೆಡು ಬಾರಿ ವಿವಿಧ ಕಾರಣಗಳಿಂದಚುನಾವಣೆ ರದ್ದಾಗಿದ್ದು, ಇದೀಗ ಮತ್ತೆದಿನಾಂಕ ಘೋಷಣೆ ಆದನಂತರಚುನಾವಣೆಯಲ್ಲಿ ಸ್ಪರ್ಧೆ ನಡೆಸಲುಅಭ್ಯರ್ಥಿಗಳು ಸಿದ್ಧತೆ ನಡೆಸಿದ್ದಾರೆ. ವಿಶೇಷಏನೆಂದೆ ಈ ಬಾರಿ ಚುನಾವಣೆ ನಡೆದರೆಬಿಜೆಪಿ ಸದಸ್ಯರೇ ಎರಡು ಗುಂಪುಗಳಲ್ಲಿಚುನಾವಣೆಯ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿವೆ. ಈಗಾಗಲೇ ಎರಡು ಗುಂಪುಗಳುತಮ್ಮ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆಇಳಿಸುವ ಎಲ್ಲ ತಯಾರಿಗಳು, ಸಭೆಗಳುನಡೆಸುತ್ತಿರುವುದು ಸಾಮಾನ್ಯವಾಗಿದೆ.ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಮಾಜಿ ಬಿಎಸ್‌ಎಸ್‌ಕೆ ಅಧ್ಯಕ್ಷ ಸಂಜಯ್‌ ಖೇಣಿ ಒಂದು ಪೆನಲ್‌ ರಚಿಸಿಕೊಂಡಿದ್ದು,ಇನ್ನೊಂದು ಕಡೆ ಬಿಜೆಪಿ ಹಿರಿಯ ಮುಖಂಡ ಸುಭಾಷ ಕಲ್ಲೂರ್‌ನೇತೃತ್ವದಲ್ಲಿ ಬಿಜೆಪಿ ಮುಖಂಡ ವಿಶ್ವನಾಥ ಮಾಡಗೋಳ್‌ ಮುಂದಾಳತ್ವದಲ್ಲಿ ಒಂದುಪೆನಲ್‌ ರಚಿಸಿಕೊಂಡು ಚುನಾವಣೆ ಅಖಾಡಕ್ಕೆ ಇಳಿಯಸಲು ಸಜ್ಜಾಗುತ್ತಿದ್ದಾರೆ.ಈ ಕುರಿತು ಕಲ್ಲೂರ್‌ ಅವರ ನಿವಾಸದಲ್ಲಿಸೋಮವಾರ ವಿಶೇಷ ಸಭೆ ಕೂಡನಡೆದಿದ್ದು, ಸಭೆಯಲ್ಲಿ ಹಿರಿಯ ಮುಖಂಡಸುಭಾಷ್‌ ಕಲ್ಲೂರ್‌, ವಿಶ್ವನಾಥ ಪಾಟೀಲ,ಸೋಮನಾಥ ಪಾಟೀಲ, ರವಿಕಾಂತಹೂಗಾರ, ಮಲ್ಲಿಕಾರ್ಜುನ ಪಾಟೀಲಬೆಳಕೇರಾ, ಸುಭಾಷ ಗಂಗಾ ಸೇರಿದಂತೆ ಇತರರು ಇದ್ದರು.