
ಕಲಬುರಗಿ,ಮಾ.5-ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನಹಿಪ್ಪರಗಿ ಗ್ರಾಮದ ಶಿವಲಿಂಗೇಶ್ವರ ವಿರಕ್ತ ಮಠದ ಶಿವಲಿಂಗ ಮಹಾಸ್ವಾಮಿಗಳ 106ನೇ ಹುಟ್ಟುಹಬ್ಬದ ನಿಮಿತ್ಯ ಬಸವೇಶ್ವರ ಬೋಧನಾ ಹಾಗೂ ಆಸ್ಪತ್ರೆ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಅಭಿನವ ಶಿವಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ 298 ಜನರಿಗೆ ತಪಾಸಣೆ ಮಾಡಿ 63 ಜನ ಫಲಾನುಭವಿಗಳನ್ನು ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಸೇರಿಸಲಾಯಿತು.
ಶಿಬಿರದಲ್ಲಿ ಮಾದನಹಿಪ್ಪರಗಿ ಹಾಗೂ ಸುತ್ತಮುತ್ತಲ್ಲಿನ ಗ್ರಾಮಗಳ 60 ವರ್ಷ ಮೇಲ್ಪಟ್ಟವರು ಭಾಗವಹಿಸಿ ಶಿಬಿರದ ಸದುಯೋಗ ಪಡೆದುಕೊಂಡರು.
ಶಿಬಿರದಲ್ಲಿ ಬಸವಲಿಂಗಯ್ಯ ಸ್ವಾಮಿ, ಸಿದ್ದರಾಮ ಅರಳಿಮರ, ರೇವಪ್ಪ ತೊಳನೂರ, ಸೋಮನಾಥ ಕೌಲಗಿ, ರಾಜಕುಮಾರ ಕಂಬಾರ, ಮಹಾದೇವಯ್ಯ ಸ್ವಾಮಿ, ಮಲ್ಲಿನಾಥ ಪರೋಣಿ, ನಾಗನಾಥ ಕಾವಳೆ, ಯಲ್ಲಪ್ಪ ಇಂಗಳೆ ಇದ್ದರು.