
ಹೊಸಕೋಟೆ,ಮಾ.೮-ಯೋಗಿ ನಾರಾಯಣ ಯತೀಂದ್ರರು ಯಾವುದೇ ಜಾತಿ ಧರ್ಮದ ಪರ ನಿಲ್ಲದೆ ಕಾಲಜ್ಞಾನಿಯಾಗಿ ಸಮಾಜದ ಏಳಿಗೆಗೆ ಶ್ರಮಿಸಿದವರು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕು ಆಡಳಿತ ಹಾಗೂ ಬಲಿಜ ಸಂಘದ ವತಿಯಿಂದ ಆಯೋಜಿಸಿದ್ದ ಯೋಗಿ ನಾರಾಯಣ ೨೯೭ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಲ್ಗುಣ ಮಾಸದ ಹುಣ್ಣಿಮೆಯಂದು ಕಳೆದ ೧೦೦ ವರ್ಷಗಳಿಂದ ಪ್ರತಿ ವರ್ಷ ಯೋಗಿ ನಾರಾಯಣ ಜಯಂತಿ ಆಚರಣೆ ಮಾಡಲಾಗುತ್ತಿತ್ತು. ಅದರಂತೆ ಈ ವರ್ಷವೂ ಆಚರಿಸಲಾಗುತ್ತಿದೆ. ಆದರೆ ಈ ಭಾರಿ ಸರ್ಕಾರದಿಂದ ಯೋಗಿ ನಾರಾಯಣ ತಾತರವರ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಸರ್ಕಾರದಿಂದ ಯೋಗಿ ನಾರಾಯಣ ಜಯಂತಿ ಆಚರಣೆ ಮಾಡುವ ಮೂಲಕ ಸಮರ್ಪಕ ಗೌರವ ಸಲ್ಲಿಸಲಾಗಿದೆ. ಎಂದರು.
ಬಲಿಜ ಸಂಘದ ತಾಲೂಕು ಅಧ್ಯಕ್ಷ ಮುನಿರಾಜ್ ಮಾತನಾಡಿ ಯೋಗಿ ನಾರಾಯಣರವರು ಯಾವುದೇ ಒಂದು ಜಾತಿಗೆ ಸೀಮಿತರಾದವರಲ್ಲ ಅವರ ಭಕ್ತರು ಎಲ್ಲಾ ಜಾತಿಗಳಲ್ಲೂ ಇದ್ದಾರೆ. ಎಲ್ಲಾ ಭಕ್ತರು ಒಗ್ಗೂಡಿ ಈ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಎಲ್ಲಾ ಭಕ್ತರು ಮುಂದಿನ ದಿನಗಳಲ್ಲಿ ಒಂದಾಗಿ ಇನ್ನಷ್ಟು ವಿಜೃಂಭಣೆಯಿಂದ ಕಾರ್ಯನಿರ್ವಹಿಸಲು ಯೋಜನೆ ಹಾಕಿಕೊಂಡಿದ್ದೇವೆ. ಸರ್ಕಾರ ನಮಗೆ ಶಿಕ್ಷಣದಲ್ಲಿ ೨ಎ ಧಕ್ಕುತ್ತಿದ್ದು, ಉದ್ಯೋಗದಲ್ಲೂ ಮೀಸಲಾತಿ ಧಕ್ಕುವ ನಿರೀಕ್ಷೆ ಇದೆ ಎಂದರು.
ಬಲಿಜ ಸಂಘಕ್ಕೆ ಸೂಕ್ತ ಸ್ಥಳದ ಭರವಸೆ
ಹೊಸಕೋಟೆ ಟೌನ್ ಅಥವಾ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಬಲಿಜ ಸಂಘಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯವಾದ ಜಾಗವನ್ನು ಗುರ್ತಿಸಿ, ಸಮುದಾಯಕ್ಕೆ ಕೊಡುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು. ಅಷ್ಟೇ ಸರ್ಕಾರ ಕೂಡ ಕೇವಲ ಶಿಕ್ಷಣ ಅಷ್ಟೆ ಅಲ್ಲ ಉದ್ಯೋಗದಲ್ಲೂ ಮೀಸಲಾತಿ ಕೊಡುವ ಕೆಲಸ ಆಗಬೇಕು. ಆದ್ದರಿಂದ ಸಮುದಾಯದ ಬೆನ್ನಿಗೆ ನಾನು ನಿಂತು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡುವ ಕಾರ್ಯ ಮಾಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.