29 ವರೆಗೆ ಜನ ಸ್ವರಾಜ ಯಾತ್ರೆ

ಕಲಬುರಗಿ :ಆ.27: ರಾಷ್ಟ್ರೀಯ ವಿಕಾಸ ಮತ್ತು ಸಮಾಜ ರಾಷ್ಟ್ರೀಯ ಭಾಗೀದಾರಿ, ರಾಷ್ಟ್ರೀಯ ಸಮಾಜ ಪಕ್ಷದ ಗುರಿ, ರಾಜ್ಯ ಮತ್ತು ಕೇಂದ್ರದಲ್ಲಿ ಶಾಸನ ಬದ್ಧವಾಗಿ ಅಧಿಕಾರ ಪಡೆಯುವ ಮೂಲಕ ಗುರಿಯತ್ತ ಮನ್ನಡೆಯೋಣ, ರಾಷ್ಟ್ರೀಯ ಸಮಾಜ ಪಕ್ಷವು ದೇಶದಲ್ಲಿನ ಪ್ರಸ್ತುತ ಜ್ವಲಂತ ಸಮಸ್ಯೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ಮುಂಬರುವ 2024 ರ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಜನ ಸ್ವರಾಜ ಯಾತ್ರೆ ಮಿಷಿನ ಲೋಕ ಸಭಾ 2024 ಮಹಾರಾಷ್ಟ್ರದ ಪಂಢರಪೂರ ಶ್ರೀ ವಿಠಲ ರುಕುಮಾಯಿ ಪುಣ್ಯ ಕ್ಷೇತ್ರದಿಂದ ಆರಂಭವಾಗಿದೆ.
ರಾಷ್ಟ್ರೀಯ ಸಮಾಜ ಪಕ್ಷ ಕರ್ನಾಟಕ ಘಟಕದ ವತಿಯಿಂದ ಶನಿವಾರ ಬೆಳಿಗ್ಗೆ 11.00 ಘಂಟೆಗೆ ಜನ ಸ್ವರಾಜ ಯಾತ್ರೆ ಮಿಷಿನ ಲೋಕ ಸಭಾ 2024 ???ಯಾಲಿ ಕಲಬುರಗಿ ನಗರದ ಜಗತ್ ವೃತ್ತದಲ್ಲಿನ ಸಂಗೋಳ್ಳಿ ರಾಯಣ್ಣ, ಡಾ. ಬಿ. ಆರ್. ಅಂಬೇಡ್ಕರ್, ಮಾಹಾತ್ಮಾ ಬಸವೇಶ್ವರ, ಮತ್ತು ದಾಬು ಜಗಜೀವನರಾಮ ರವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಲಾಯಿತು.
ಕಲಬುರಗಿಯಿಂದ ಹೊರಟು ಜನ ಸ್ವರಾಜ ಯಾತ್ರೆಯು ಚೆರ್ವ, ಸಿಂದಗಿ ಮಾರ್ಗವಾಗಿ ವಿಜಯಪೂರ ಬಾಗಲಕೋಟ, ಹುಬ್ಬಳ್ಳಿ ಧಾರವಾಡ, ಬೆಳಗಾಂವ ಮೂಲಕ ನಂದಗಡ್ ವರೆಗೆ ಸಾಗುತ್ತಾ, ಈ ಮದ್ಯ ಬರುವ ತಾಲೂಕಾ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಬಹಿರಂಗ ಸಭೆ ನಡೆಸಿ, ಪಕ್ಷದ ಧೈಯ ಉದ್ದೇಶಗಳ ಕುರಿತು ಪ್ರಚಾರ ಮಾಡುತ್ತಾ ಅಗಸ್ಟ್ 29-2023 ರಂದು ಪುಣೆಯಲ್ಲಿ ನಡೆಯುವ ರಾಷ್ಟ್ರೀಯ ಸಮಾಜ ಪಕ್ಷದ 20 ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಸಮಾವೇಶದಲ್ಲಿ ಪಾಲ್ಗೊಳ್ಳುವುದು.
ದೇಶದಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಯುತ್ತದೆ. ಆದರೆ ಸ್ವಾತಂತ್ರಾ ನಂತರ ಹಿಂದುಳಿದ ವರ್ಗಗಳ ಜನರ ಸಾಮಾಜಿಕ ಶೈಕ್ಷಣಿಕ, ಉದ್ಯೋಗ ಹಾಗೂ ರಾಜಕೀಯ ಪ್ರಾತಿನಿಧ್ಯ ಹೊಂದಿರುವ ಜಾತಿವಾರು ಅಂಕಿ ಅಂಶಗಳ ಸಮೀಕ್ಷೆ ವರದಿಗಳು ನಡೆಯುತ್ತಿಲ್ಲ. ಃ.P ಮಂಡಲ ವರದಿ 1991 ಹಾಗೂ ಕರ್ನಾಟಕ ರಾಜ್ಯದಲ್ಲಿ ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷಾ ವರದಿಗಳನ್ನು
ಸ್ವೀಕರಿಸಿ, ಜಾತಿವಾರು ಜನಸಂಖ್ಯೆ ಪ್ರಗತಿ ವರದಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸುವುದು, ರಾಜ್ಯ ಹಾಗೂ ಕೇಂದ್ರದ ಬಜೆಟ್ ನಲ್ಲಿ 0.ಃ.ಅ. & ಒ.ಃ.ಅ ವರ್ಗಗಳಿಗೆ ಅನುದಾನ ಹಂಚಿಕೆ ಕೊರತೆಯನ್ನು ಸರಿದೂಗಿಸುವಂತೆ ಒತ್ತಾಯಿಸುವುದು.ರಾಜ್ಯಗಳ ವಿಧಾನ ಸಭೆ ಮತ್ತು ಲೋಕಸಭೆಯಲ್ಲಿ ಶೇ. 27 ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲಿಡುವಂತೆ ಒತ್ತಾಯಿಸುವುದು.ಕಲ್ಯಾಣ ಕರ್ನಾಟಕದ 371 ಜೆ ಸಮರ್ಪಕವಾಗಿ ಅನುಷ್ಠಾನವಾಗಿರುವುದಿಲ್ಲ. ಇದನ್ನು ಸರಿಪಡಿಸುವದು, ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೂ ಮೂಲಭೂತ ಸೌಲಭ್ಯಗಳಾದ ಶಿಕ್ಷಣ, ಆರೋಗ್ಯ, ರಸ್ತೆ, ಸಾರಿಗೆ, ಚರಂಡಿ ಮತ್ತು ಶೌಚಾಲಯಗಳನ್ನು ನಿರ್ಮಾಣ ಮಾಡಲು ಒತ್ತಾಯಿಸುವದು.ಗ್ರಾಮೀಣ ಯುವಕರಿಗೆ ಕೃಷಿ ಉತ್ತೇಜನ ತರಬೇತಿ ನೀಡುವದು. ತೋಟಗಾರಿಕೆ ಹಾಗೂ ಕೃಷಿ ಉತ್ಪಾದನೆಗಳಿಗೆ ಡಾ. ಒ.S ಸ್ವಾಮಿನಾಥನ್ ವರದಿ ಆದರಿಸಿ ಬೆಂಬಲ ಬೆಲೆ ನಿಗದಿಪಡಿಸುವುದು, ಯುವಕರಿಗೆ ಗುಣಮಟ್ಟದ ಕೌಶಲ್ಯಾಧಾರಿತ ತಾಂತ್ರಿಕ ಶಿಕ್ಷಣ ಒದಗಿಸಿ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸುವುದು. ದೇಶದಾದ್ಯಂತ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು, ಸರಕಾರದ ನಿಯಂತ್ರಣದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸುವುದು, ಇಂತಹ ಅನೇಕ ಬೇಡಿಕೆಗಳನ್ನು ಇಟ್ಟಿಕೊಂಡು ದೇಶಾದದ್ಯಂತ ಸಂಚರಿಸುವ ಈ ಯಾತ್ರೆ ಜನರ ಮನೆ-ಮನಗಳಲ್ಲಿ ಮೂಡುವಂತೆ ಮಾಡುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಪರಿವರ್ತನೆ ಬಯಸುವ ಎಲ್ಲರು ಈ ಯಾತ್ರೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರುಶಿವಲಿಂಗಪ್ಪ ಕಿನ್ನೂರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಶರಣಬಸಪ್ಪ ದೊಡ್ಮನಿ, ಸುನಿಲ್ ಕಿನ್ನೂರ್, ಸುನಿಲ್ ಬಂಡಗಾರ್, ಶರಣಪ್ಪ ಪೂಜಾರಿ, ದೇವಿಂದ್ರ ಕೆ ಚಿಗರಳ್ಳಿ,ಭೀಮರಾಯ ಕಟ್ಟಿಮನಿ, ಶ್ರೀಮಂತ ಮಾವ್ನೂರ್, ಮಾಂತೇಶ್ ಅವರಾದಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.