29 ರಂದು ಹಾಸ್ಟೆಲ್‍ಕಾರ್ಮಿಕರ ಹೋರಾಟ

ಕಲಬುರಗಿ ಜು 26:ಹಾಸ್ಟೆಲ್ ಕಾರ್ಮಿಕರ ವೇತನವನ್ನು ರೂ.35,950 ರೂಗೆ ಹೆಚ್ಚಿಸಲು ಮತ್ತು ಇತರ ಶಾಸನಬದ್ಧ ಸೌಕರ್ಯಗಳಿಗೆ ಆಗ್ರಹಿಸಿ ಜು.29 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ರಾಜ್ಯಮಟ್ಟದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಕೆ ಸೋಮಶೇಖರ್ ಯಾದಗಿರಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಾರದ ರಜೆ, ರಾಷ್ಟ್ರೀಯಹಬ್ಬಗಳ ರಜೆ, ಸಾಂಧರ್ಭಿಕ ರಜೆಗಳನ್ನು ನೀಡಬೇಕು. ದಿನಕ್ಕೆ 8 ಗಂಟೆಗಳ ಅವಧಿಗೆ ಮಾತ್ರ ದುಡಿಸಿಕೊಳ್ಳಬೇಕು. 8
ಗಂಟೆಗಳ ನಂತರ ಹೆಚ್ಚುವರಿ ಅವಧಿಯ ಕೆಲಸಕ್ಕೆ ಕಾರ್ಮಿಕ
ಕಾನೂನುಗಳ ಪ್ರಕಾರ ದುಪ್ಪಟ್ಟು ವೇತನ ನೀಡಬೇಕು.ಲಾಕ್‍ಡೌನ್ ಅವಧಿಯ ವೇತನವನ್ನು ತಕ್ಷಣವೇ ಪಾವತಿಸಬೇಕು.ಮಾಸಿಕ ವೇತನ, ಪಿಎಫ್ ಮತ್ತು ಇಎಸ್‍ಐ ವಂತಿಗೆಯನ್ನು ಪ್ರತಿತಿಂಗಳು ಗುತ್ತಿಗೆ ಏಜೆನ್ಸಿಗಳು ಪಾವತಿಸುವ ಕುರಿತು ಆಯಾಜಿಲ್ಲೆ, ತಾಲ್ಲೂಕು ಅಧಿಕಾರಿಗಳ ಹೊಣೆ ಮಾಡುವದು ಸೇರಿದಂತೆ ಹಲವು ಬೇಡಿಕೆಗಳಿಗೆ ಹೋರಾಟನಡೆಸಲಾಗುವದು ಎಂದರು.