29 ಬಡ ಕುಟುಂಬಗಳಿಗೆ ಆಹಾರ್ ಕಿಟ್ ವಿತರಣೆ

ವಿಜಯಪುರ, ಮೇ.21-ಕೋವಿಡ್ -19 2ನೇ ಅಲೆಯ ಲಾಕ್‍ಡೌನ್ ಸಂದರ್ಭದಲ್ಲಿ 29 ಕುಟುಂಬಗಳಿಗೆ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.-49 ಅಫಜಲಪೂರ ಟಕ್ಕೆ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಯೋಗೇಶಕುಮಾರ ಎಸ್. ನಡುವಿನಕೇರಿಯವರು ಮಗಳ ಮತ್ತು ಮಡದಿಯ ಹುಟ್ಟು ಹಬ್ಬದ ಆಚರಣೆಯನ್ನು 29 ಬಡ ಕುಟುಂಬಗಳಿಗೆ ಆಹಾರ್ ಕಿಟ್‍ಗಳನ್ನು ವಿತರಿಸುವ ಮೂಲಕ ಹುಟ್ಟು ಹಬ್ಬ ಆಚರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಯೋಗೇಶಕುಮಾರ ಎಸ್. ನಡುವಿನಕೇರಿ ಮಾತನಾಡಿ, ಇಂದು ಇಡೀ ದೇಶ ಕೊರೋನಾ ಮಹಾಮಾರಿಯ 2ನೇ ಅಲೆಯಿಂದ ತತ್ತರಿಸಿ ಹೋಗಿದ್ದು, ವರ್ತಮಾನ ಪತ್ರಿಕೆ, ಟಿವಿ ಚಾನೆಲ್ ಗಳ ಕೊರೋನಾ ವಾರ್ತೆ, ಸಾಮಾಜಿಕ ಜಾಲತಾಣಗಳ ಕೊರೋನಾ ಘಟನೆಗಳ ವಿಡಿಯೋ ನೋಡಿ, ಅಥವಾ ಆಕ್ಸಿಜನ್ ಕೊರತೆ, ಬೆಡ್ ಸಿಗದೇ, ನರಳಿ ಸಾಯುವ ವಿಚಾರಗಳು, ಅಥವಾ ನೆಚ್ಚಿನ ಕುಟುಂಬದವರು, ಸ್ನೇಹಿತರ ಅಗಲಿಕೆಯಿಂದ ಜನಸಾಮಾನ್ಯರಲ್ಲಿ ಭಯ, ಚಿಂತೆ, ನಿರಾಶೆ, ಆತ್ಮಹತ್ಯೆಯ ವಿಚಾರಗಳು ಇಂದು ಹೆಚ್ಚಾಗಿದೆ ಎಂದು ಹೇಳಿದರು.
ಪರಿಣಾಮವಾಗಿ ಕೊರೋನಾ ಸೋಂಕಿನ ಜೊತೆಗೆ ಅದರ ಭಯದಿಂದಲೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮನಸ್ಥೈರ್ಯ ಹೆಚ್ಚಿಸುವುದು, ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು, ನಿರ್ಭೀತಿಯಿಂದ ಪರಿಸ್ಥಿತಿಯನ್ನು ಎದುರಿಸುವುದು, ನಿಶ್ಚಿಂತೆಯಿಂದ ಇರುವುದು ಬಹಳ ಮುಖ್ಯವಾಗಿದೆ ಎಂದರು.
ಈ ಎಲ್ಲ ಮುನ್ನೆಚ್ಚರಿಕೆಯಿಂದ ನಾವು ಖಂಡಿತವಾಗಿ ಈ ಮಹಾಮಾರಿಯನ್ನು ಯಶಸ್ವಿಯಾಗಿ ಎದುರಿಸಬಹುದು. ಧೈಯರ್ಂ ಸರ್ವತ್ರ ಸಾಧನಂ ಎಂಬಂತೆ ಇಂತಹ ಸಂದರ್ಭದಲ್ಲಿ ಮನೋಧೈರ್ಯವನ್ನು ಹೆಚ್ಚಿಸುವುದು ಅತ್ಯಂತ ಅವಶ್ಯಕವಿದೆ ಎಂದು ಹೇಳಿದರು