ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ,ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಹಾಗೂ ಮಣಿಪಾಲ್ ಆಸ್ಪತ್ರೆ ವತಿಯಿಂದ ಇಂದು ನಗರದ ಸಿದ್ದಗಂಗಾ ಸಭಾಂಗಣದಲ್ಲಿ ಮೂತ್ರಪಿಂಡ ಆರೈಕೆ ಕುರಿತು ಉಪನ್ಯಾಸ ಮತ್ತು ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ವಿತರಣೆಯನ್ನು ಮಾಡಲಾಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ವೀರಪ್ಪ ಎಂ.ಬಾವಿ,ವರದಿಗಾರರಾ ಕೂಟದ ಅಧ್ಯಕ್ಷ ಜಿಎಂಆರ್ ಆರಾಧ್ಯ ಪತ್ರಕರ್ತ ಕೆ ಚಂದ್ರಣ್ಣ ಹಾಗೂ ಮಣಿಪಾಲ್ ಆಸ್ಪತ್ರೆಯ ಅರುಣ್ ಚಕ್ರವರ್ತಿ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿ ಮಂಜುನಾಥ್ , ಖಜಾಂಚಿ ಮಾಗನೂರು ಮಂಜುನಾಥ್ ಉಪಸ್ಥಿತರಿದ್ದರು.