284ನೇ ಸೇವಾಲಾಲ್ ಜಯಂತೋತ್ಸವ

ಗುರುಮಠಕಲ್:ಫೆ.27: ಮಾನವ ಜನ್ಮಬಲು ಶ್ರೇಷ್ಠ ವಾದದ್ದು ದುರ್ಚಟಗಳಿಂದ ಮುಕ್ತರಾಗಿ ಮೋಕ್ಷ ಪ್ರಾಪ್ತಿ ಸಿಗಬೇಕಾದರೆ ಮಾನವರಾದ ನಾವು ಸತ್ಸಂಗ ದೇವರ ನಾಮ ಸ್ಮರಣೆ ಬಹಳ ಮುಖ್ಯ ವಾದದ್ದು ಎಂದರು ಮರೇಮ್ಮದೇವಿ ದೈವಸಂಬುತರಾದ ಸಮಾಜ ಸುಧಾರಕರು ನಮ್ಮ ಸಮಾಜದ ಆರಾಧ್ಯ ದೈವ ಸಂತ ಸೇವಾ ಲಾಲ್ ಮಹಾರಾಜರ 284 ನೇ ಜಯಂತೋತ್ಸವ ಸಮಾರಂಭ ನಡೆಯುತ್ತಿರುವುದು ಬಹಳ ಸಂತೋಷವೆಂದು ಗೊಬ್ಬರವಾಡಿ ಮಠದ ಪೂಜ್ಯ ಶ್ರೀ ಬಳಿರಾಮ ಮಹಾರಾಜರು ಹೇಳಿದರು. ಪಟ್ಟಣದ ಗಾಂಧಿ ಮೈದಾನದಲ್ಲಿ ತಾಲೂಕಿನ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ವತಿಯಿಂದ ಸಂತ ಸೇವಾಲಾಲ್ ಮಹಾರಾಜರ 284ನೇ ಜಯಂತೋತ್ಸವ ನಿಮಿತ್ತ ಆಯೋಜಿಸಿದ್ದ ಸಮಾರಂಭದ ಮೆರವಣಿಗೆ ಚಾಲನೆ ನೀಡಿ ಮಾತನಾಡಿದ ಅವರು ಇನ್ನೂ ನಮ್ಮ ಸಮಾಜವು ಎಲ್ಲಾ ರಂಗಗಳಲ್ಲೂ ಸಂಘಟಿತವಾಗ ಬೇಕಾಗಿದೆ ಎಂದರು. ಬಂಜಾರಾ ಶಕ್ತಿ ಪೀಠದ ಸೇವಾ ನಗರ ಮಠ ಬೀದರ ಪೂಜ್ಯ ಶ್ರೀ ಗೋವಿಂದ ರಾವ್ ಮಹಾ ರಾಜರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಸಂತ ಸೇವಾ ಲಾಲ್ ಮಹಾರಾಜರು ದೇವಿಮಾತೆಯ ಆರಧಕರಾಗಿ ಪಾರಮಾರ್ಥ ಜೀವನದ ಅನುಭವಗಳನ್ನು ತತ್ವಗಳ ಮೂಲಕ ಜನರ ಮೂಢನಂಬಿಕೆ ಅಜ್ಜಾನ ಅಂಧಕಾರವನ್ನು ದೂರ ಮಾಡುವ ಮೂಲಕ ಜನರಲ್ಲಿ ಜಾಗೃತಿ ತುಂಬಿದ ಮಹಾನ್ ಸಂತರು ಸೇವಾ ಲಾಲ್ ಮಹಾರಾಜರು ಎಂದು ಹೇಳಿದರು. ಸಂಘದ ಪದಾಧಿಕಾರಿಗಳು.ಎಲ್ಲಾ ತಾಂಡಾಗಳ ನಾಯಕರು. ಡಾವ. ಕಾರಬಾರಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಸಮಾಜದ ಮುಖಂಡರು. ತಾಂಡಾದ ಗ್ರಾಮಸ್ಥರ ಸಮ್ಮುಖದಲ್ಲಿ ಪಟ್ಟಣದ ತಹಸಿಲ್ದಾರ್ ಕಚೇರಿಯಿಂದ ಪ್ರಮುಖ ಬೀದಿಗಳ ಮೂಲಕ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರ ಮೆರವಣಿಗೆ ಬಹು ಅದ್ದೂರಿಯಾಗಿ ವಿಜ್ರಂಭಣೆಯಿಂದ ಜರುಗಿತು. ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಬಂಜಾರಾ ಸೇವಾ ಸಮಾಜದ ತಾಲೂಕು ಅಧ್ಯಕ್ಷ ಕಾಶಿನಾಥ್ ರಾಠೋಡ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಈಶ್ವರ ನಾಯಕ್. ಕಾಕಲವಾರ ಗ್ರಾಮ ಪಂಚಾಯಿತಿ ಸದಸ್ಯರು ರಮೇಶ್ ರಾಠೋಡ್. ಸುರೇಶ್ ಚಿನ್ನ ರಾಠೋಡ. ಕಾಶಿಬಾಯಿ. ಲಕ್ಷ್ಮೀ ಬಾಯಿ. ಚಂದು ರಾಠೋಡ. ಮೋತಿಲಾಲ್ ರಾಠೋಡ್ ಸಾಮಾಜದ ಮುಖಂಡರು ಇದ್ದರು ರಮೇಶ್ ಪ್ರಾಸ್ತಾವಿಕ ಮಾತನಾಡಿದರು. ರವಿಂದ್ರ ಕಾರ್ಯಕ್ರಮ ನಿರೂಪಿಸಿದರು.