ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸರಸ್ವತಿ ಪುತ್ರಿ, ಸ್ವರಶಿರೋಮಣಿ, ಪದ್ಮಭೂಷಣ ಡಾ. ಗಂಗೂಬಾಯಿ ಹಾನಗಲ್ ಅವರ ಪುಣ್ಯಸ್ಮರಣೆ ಅಂಗವಾಗಿ ಅವರ ಮನೆಗೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ತೆರಳಿ ಅಜ್ಜಿಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಪಂಡಿತ್ ಕೃಷ್ಣನೇಂದ್ರ ವಾಡಿಕರ್ ವೈಷ್ಣವಿ ಹಾನಗಲ್ ಮದನ್ ಕುಲಕರ್ಣಿ, ಪುಷ್ಪಕ ರಾಯ್ಕರ್, ಪ್ರಮೋದ್ ಹಿರೇಮಠ, ಅನಿಲ್ ದೇಸಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.