28, 723 ಮಂದಿಗೆ ಕೊರೊನಾ ಸೋಂಕು: 1,41 ಲಕ್ಷಕ್ಕೇರಿದ ಸಕ್ರಿಯ ಪ್ರಕರಣ

ಬೆಂಗಳೂರು, ಜ.14- ರಾಜ್ಯದಲ್ಲಿ ಕೊರೊನಾ ಸೋಂಕು ಇಂದು ಮತ್ತಷ್ಟು ಹೆಚ್ಚಾಗಿದ್ದು ಇದುವರೆಗಿನ ಅತ್ಯಧಿಕ ಸಂಖ್ಯೆ 28 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ‌.

ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 28,723 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.12.98 ಏರಿಕೆಯಾಗಿದೆ. ಸೋಂಕಿನಿಂದ ಸಾವನ್ನಪ್ಪಿದವರ ಪ್ರತಿಶತ ಸಂಖ್ಯೆ ಶೇ.0.04 ರಷ್ಟು ಇದೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,41,337 ಕ್ಕೆ ಏರಿಕೆಯಾಗಿದೆ. ಇಂದು 14 ಮಂದಿ ಸಾವನ್ನಪ್ಪಿದ್ದಾರೆ ಅವಧಿಯಲ್ಲಿ 3,105 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.

ರಾಜಧಾನಿಯಲ್ಲಿ ಸೋಂಕು ಏರಿಕೆ;

ಬೆಂಗಳೂರಿನಲ್ಲಿ ಇಂದು 20,121 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.ಇದು ಸಹಜವಾಗಿ ಆತಂಕ ಇನ್ನಷ್ಟು ಹೆಚ್ಚು ಮಾಡಿದೆ.ಬರೀ ಬೆಂಗಳೂರಿನಲ್ಲಿ ಮಾತ್ರ ಏರಿಕೆಯಾಗುತ್ತಿದ್ದ ಸೋಂಕು ಸಂಖ್ಯೆ ರಾಜ್ಯದ‌ ವಿವಿಧ ಜಿಲ್ಲೆಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ.

ರಾಜಧಾನಿಯಲ್ಲಿ ಇಂದು 1695 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಇಂದು 7 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ ‌ 31,53,247 ಕ್ಕೆ ಏರಿಕೆಯಾಗಿದೆ.ಇಲ್ಲಿಯ ತನಕ 29,73,470 ಕ್ಕೆ ಏರಿಕೆಯಾಗಿದೆ.ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 38,411ಕ್ಕೆ ಏರಿಕೆ.

2,21 ಲಕ್ಷ ಮಂದಿಗೆ ಪರೀಕ್ಷೆ:

ರಾಜ್ಯದಲ್ಲಿ ಇಂದು 2,21,205 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು ಇಲ್ಲಿಯತನಕ ಒಟ್ಟಾರೆಯಾಗಿ 5,85,92,562 ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇಂದಿನ ಪ್ರಕರಣ

ಜಿಲ್ಲೆ ಎಷ್ಟು

  • ಬಾಗಲಕೋಟೆ- 49
  • ಬಳ್ಳಾರಿ – 400
  • ಬೆಳಗಾವಿ – 227
  • ಬೆಂಗಳೂರು ಗ್ರಾಮಾಂತರ- 418
  • ಬೆಂಗಳೂರು ನಗರ. – 20,212
  • ಬೀದರ್ 131
  • ಚಾಮರಾಜನಗರ- 106
  • ಚಿಕ್ಕಬಳ್ಳಾಪುರ- 246
  • ಚಿಕ್ಕಮಗಳೂರು- 174
  • ಚಿತ್ರದುರ್ಗ- 104
  • ದಕ್ಷಿಣ ಕನ್ನಡ – 639
  • ದಾವಣಗೆರೆ- 187
  • ಧಾರವಾಡ- 338
  • ಗದಗ- 110
  • ಹಾಸನ- 654
  • ಹಾವೇರಿ- 25
  • ಕಲಬುರಗಿ- 338
  • ಕೊಡಗು- 104
  • ಕೋಲಾರ- 502
  • ಕೊಪ್ಪಳ- 49
  • ಮಂಡ್ಯ- 554
  • ಮೈಸೂರು- 803
  • ರಾಯಚೂರು- 172
  • ರಾಮನಗರ – 239
  • ಶಿವಮೊಗ್ಗ- 315
  • ತುಮಕೂರು- 796
  • ಉಡುಪಿ- 497
  • ಉತ್ತರ ಕನ್ನಡ- 301
  • ವಿಜಯಪುರ – 106
  • ಯಾದಗಿರಿ- 18