
ಜೇವರ್ಗಿ :ಡಿ.25: ದೊಡ್ಡಬಳ್ಳಾಪೂರ ಬಳಿಯ ಗೌರಬಿದನೂರ ರಸ್ತೆಯಲ್ಲಿರುವ ಪ್ರಕೃತಿ ರೆಸಾರ್ಟ್ನಲ್ಲಿ ಬರುವ ದಿ.28 ಮತ್ತು 29 ರಂದು ರಾಜ್ಯ ಮಟ್ಟದ ವೈಚಾರಿಕ ಚಿಂತನ ಕಾರ್ಯಾಗಾರ ಹಾಗೂ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ ಎಂದು ಬಸವಕೇಂದ್ರದ ತಾಲೂಕು ಘಟಕದ ಅಧ್ಯಕ್ಷ ಶರಣಬಸವ ಕಲ್ಲಾ ತಿಳಿಸಿದ್ದಾರೆ.
ಡಾ.ಹುಲಿಕಲ್ ನಟರಾಜ ಅವರ ನೇತೃತ್ವದಲ್ಲಿ ನಡೆಯುವ ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ವಿದ್ವಾಂಸರು, ಸಾಹಿತಿಗಳು, ಚಿಂತಕರು ಭಾಗವಹಿಸಲಿದ್ದಾರೆ. ದಿ.28 ರಂದು ಬೆಳಿಗ್ಗೆ 11:00 ಗಂಟೆಗೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ ಸಮಾರಂಭ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ವೃತ್ತ ಅಧೀಕ್ಷಕರಾದ ಎಸ್.ಕೆ.ಉಮೇಶ, ನ್ಯಾಯವಾದಿ ಇರ್ಷಾದ್ ಅಹ್ಮದ್, ಕಿದ್ವಾಯಿ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ.ಪ್ರಭಾ, ಪತ್ರಕರ್ತ ಗೌರೀಶ್ ಅಕ್ಕಿ ಆಗಮಿಸುವರು. ಬೀದರನ ಶಿಕ್ಷಣ ಪ್ರೇಮಿ ಬಾಬು ದಾನಿರಾವ್ ಅಧ್ಯಕ್ಷತೆ ವಹಿಸುವರು.
11:30 ಗಂಟೆಯಿಂದ ನಡೆಯುವ ವಿಭಾಗವಾರು ಚರ್ಚೆಯಲ್ಲಿ ಬೆಂಗಳೂರು ಉಚ್ಛ ನ್ಯಾಯಾಲಯದ ನ್ಯಾಯವಾದಿ ಹೆಚ್.ಪಿ.ಮಲ್ಲೇಶಗೌಡರ, ಹೊಸಪೇಟೆಯ ಸಮಾಜ ಸೇವಕ ರಾಜೇಂದ್ರ, ಚಾಮರಾಜನಗರದ ಶಿಕ್ಷಣ ಪ್ರೇಮಿ ಮಹಾದೇವ, ಮಳವಳ್ಳಿಯ ಸಿದ್ದರಾಜು, ಚಟ್ಟನಹಳ್ಳಿಯ ಡಾ.ಬಸವರಾಜು, ಚಿತ್ರದುರ್ಗದ ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸುವರು, ಡಾ.ಕಾಮೇಶ್ವರಿಯವರು, ತುಮಕೂರಿನ ಗುರುಮೂರ್ತಿ, ಚಿತ್ರದುರ್ಗದ ಮಲ್ಲಿಕಾರ್ಜುನಯ್ಯ, ಬಳ್ಳಾರಿಯ ನ್ಯಾಯವಾದಿ ವಿ.ವಿಜಯಕುಮಾರ, ಚಿತ್ರದುಘ್ದ ಕೆ.ಜೆ.ಜಯಲಕ್ಷಮ್ಮ, ಕಲಬುರಗಿಯ ಗುಂಡಪ್ಪ, ಹೆಚ್.ಸಿ.ಪಾಟೀಲ, ಆನಂದ ಚಿಕ್ಕಮಂಗಳೂರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಪರಿಷತ್ತಿನ ಉದ್ದೇಶಗಳ ಕುರಿತು ಶಿವಮೊಗ್ಗದ ಪತ್ರಕರ್ತ ವಿ.ಟಿ.ಸ್ವಾಮಿ ವಿವರಿಸುವರು. ಇದೇ ಸಂದರ್ಭದಲ್ಲಿ ಖ್ಯಾತ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಅವರಿಂದ ಹಾಸ್ಯ ಚಟಾಕಿ ಕಾರ್ಯಕ್ರಮ ಜರುಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.