28 ರಿಂದ ಸವದತ್ತಿ ಯಲ್ಲಮ್ಮನ ದರ್ಶನ


ಮುನವಳ್ಳಿ, ಸೆ 24: ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ ಯಲ್ಲಮ್ಮನಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದರ್ಶನ ಆರಂಭಿಸಬೇಕೆಂದು ಆಗ್ರಹಿಸಿ ಇತ್ತೀಚೆಗೆ ಸರಕಾರಕ್ಕೆ ಮನವಿ ಸಲ್ಲಿಸಿದ್ದ ಕೆ.ಪಿ.ಸಿ.ಸಿ. ಪೆನಲಿಸ್ಟ್ ಪಂಚನಗೌಡ ದ್ಯಾಮನಗೌಡರ ಇವರ ಮನವಿಗೆ ಸ್ಪಂದಿಸಿದ ಸರಕಾರ ಜನರ ಶ್ರದ್ಧಾ ಭಕ್ತಿಗೆ ಗೌರವ ನೀಡುವ ಮೂಲಕ ಇದೇ ಸೆ. 28 ರಿಂದ ದೇವಿ ದರ್ಶನ ಆರಂಭಕ್ಕೆ ಅನುಮತಿ ನೀಡಿರುವುದು ಸಂತಸ ತಂದಿದೆ.
ಮುಂಬರುವ ದಿನಗಳಲ್ಲಿ ಕ್ಷೇತ್ರದ ಜನರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬೇಕೆಂದು ಪಂಚನಗೌಡ ದ್ಯಾಮನಗೌಡರ ತಿಳಿಸಿದ್ದಾರೆ.