28 ರಂದು ಇಟಗಾ ಜಾತ್ರೆ

ಕಲಬುರಗಿ ನ 17:ತಾಲೂಕಿನ ಇಟಗಾ (ಕೆ) ಗ್ರಾಮದಲ್ಲಿ ನ.28 ರಂದು ಸಾಧು ಶಿವಲಿಂಗೇಶ್ವರರ 64 ನೆಯ ಜಾತ್ರೆ ನಡೆಯಲಿದೆ.
28 ರಂದು ಮಧ್ಯಾಹ್ನ 4 ಗಂಟೆಗೆ ಕಡಕೋಳ ಮಡಿವಾಳೇಶ್ವರ ಪುರಾಣದ ಮಂಗಲ ಮತ್ತು ಧರ್ಮಸಭೆ ನಡೆಯಲಿದೆ.
ಅಂದು ರಾತ್ರಿ 8 ಗಂಟೆಗೆ ರಥೋತ್ಸವ ನಡೆಯಲಿದೆ.ರಾತ್ರಿ 10 ಗಂಟೆಗೆ ಹಾಗರಗುಂಡಗಿಯ ಗಂಧದಗುಡಿ ಕಲಾತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಸದ್ಭಕ್ತ ಮಂಡಳಿ ತಿಳಿಸಿದೆ