28 ಕ್ಕೆ ಜುಲೂಸೆ ಎ ಮೊಹ್ಮದಿ ಕಾರ್ಯಕ್ರಮ : ಜಾಗೀರದಾರ

ಜೇವರ್ಗಿ:ಸೆ.26: ಜಲ್ಸಾ ಅಮದೇ ಮುಸ್ತಫಾ ವ ಜುಲೂಸೆ ಎ ಮೊಹ್ಮದಿ ಮೆರವಣಿಗೆ ಮತ್ತು ಕಾರ್ಯಕ್ರಮವನ್ನು ಇದೆ ತಿಂಗಳ 28 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸೀರತ ಕಮೀಟಿಯ ಅಧ್ಯಕ್ಷ ಮಹ್ಮದ ಮೊಸಿನ್ ಸಾಬ್ ಜಾಗೀರದಾರ ಹೇಳಿದರು.
ಪಟ್ಟಣದ ಬಸ್ಸ್ ಡಿಪೋ ಹತ್ತಿರದ ಮಧರಸ್ ದಲ್ಲಿ ಸೊಮುವಾರ ಸೀರತ್ ಕಮೀಟಿವತಿಯಿಂದ ಸುದ್ದಿ ಗೋಷ್ಠಿ ನಡೆಸಿದರು.
ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಸೀರತ ಕಮೀಟಿಯ ಅಧ್ಯಕ್ಷ ಮಹ್ಮದ ಮೊಸಿನ್ ಸಾಬ್ ಜಾಗೀರದಾರ ಮಾತನಾಡಿ ಮಹ್ಮದ ಫೈಗಂಬರ ರವರ ಜನ್ಮದಿನದ ನಿಮಿತ್ಯವಾಗಿ ಪ್ರತಿ ವರ್ಷದಂತೆ ಈ ವರ್ಷವು ಸೆ. 28 ರಂದು ಜಲ್ಸಾ ಆಮದೇ ಮುಸ್ತಫಾ ವ ಜುಲೂಸೆ ಎ ಮೊಹ್ಮದಿ ಯ ಮೇರವಣಿಗೆ ಮತ್ತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3 ಗಂಟೆಗೆ ಮದೀನಾ ಮಸ್ಜಿದ್ ಖಾಜಾ ಕಾಲೋನಿಯಿಂದ ಬಟ್ನಾಳ ರಸ್ತೆ, ಜಾಮಿಯಾ ಮಸ್ಜಿದ್, ಮಕ್ಕಾ ಮಸ್ಜಿದ್, ಬಸವೇಶ್ವರ ವೃತ್ತದಿಂದ ಮಹೆಬೂಬ ಫಂಕ್ಷನ್ ಹಾಲ್ ವರೆಗೆ ಮೆರವಣಿಗೆ ನಡೆಸಲಾಗುವುದು. ಸಂಜೆ 7 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ, ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮದ ಮುಖಂಡರಯ ಬಾಗವಹಿಸಲಿದ್ದಾರೆ. ಆದ್ದರಿಂದ ತಾಲೂಕಿನ ಎಲ್ಲಾ ವರ್ಗದ ಜನರು ಈ ಕಾರ್ಯಕ್ರಮದಲ್ಲಿ ಬಾಗವಹಿಸಬೇಕೆಂದು ವಿನಂತಿಸಿದರು.
ಈ ಕಾರ್ಯಕ್ರಮದಲ್ಲಿ ಗುಲಬರ್ಗಾದ ಮುದರಿಸ್ ದಾರುಲ್ ಉಲೂಂ ರಾಜಾಯೇ ಮುಸ್ತಫಾ ಹಜ್ರತ ಮೌಲಾನಾ ಮೊಹ್ಮದ ಜಾವೇದ್ ಅಕ್ತರ್ ಮಿಸ್ಬಾಹಿಬ್, ನೆಲೋಗಿ ವಿರಕ್ತಮಠದ ಡಾ. ಸಿದ್ದಲಿಂಗ ಮಹಾಸ್ವಾಮಿಗಳು, ಹಜ್ರತ ಮೌಲಾನಾ ಅಲ್-ಹಾಜ್ ತಾಲೀಬ್ ಹುಸೇನಸಾಬ್, ಹಜ್ರತ ಮೌಲಾನಾ ಮೊಹ್ಮದ ಗುಲ್ಜಾರ ಅಲಂ ರಿಜವಿ, ಹಜ್ರತ ಮೌಲಾನಾ ರಿಜವಾನ ಉಲಖಾದ್ರಿಸಾಬ್, ಮುಖ್ಯ ಅತಿಥಿಗಳಾಗಿ ಅಣದೂರ ಬುದ್ಧ ವಿಹಾರ ಬೀದರ ವರ ಜ್ಯೋತಿ ಬಂತೇಜಿ, ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಮತ್ತು ಶಾಸಕರಾದ ಡಾ. ಅಜಯಸಿಂಗ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಕನ್ನಡ ಭಾಷಣಕಾರರಾಗಿ ಜನಾಬ ಲಾಲ ಹುಸೇನಸಾಬ್ ಕಂದಗಲ ಸೇರಿದಂತೆ ರಾಜಕೀಯ ಮುಖಂಡರು ಮತ್ತು ಎಲ್ಲಾ ಸಮುದಾಯದ ಮುಖಂಡರು ಆಗಮಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೊಹಮ್ಮದ್ ರೌಫ್ ಹವಾಲ್ದಾರ್, ಮೊಯುದ್ದೀನ್ ಇನಾಮ್ದಾರ್, ಮೊಹಮ್ಮದ್ ಸೋಫಿ ಸಾಬ್ ಗಂವ್ಹಾರ, ಮೆಹಬೂಬ್ ಪಟೇಲ್ ಕೊಬಾಳ, ಮೊಹಮ್ಮದ್ ನಿಸಾರ್ ಇನಾಮ್ದಾರ, ಮೆಹಬೂಬ್ ಸಾಬ್ ಕೆಂಭಾವಿ, ಮೊಹಮ್ಮದ್ ಹಾಜಿ ನಮಾಜ್, ಮೌಲಾನ ಗುಲಜಾರ ಅಲಂಸಾಬ್, ಸಯ್ಯದ್ ನಾಸೀರ್ ಭಗವಾನ್, ಕಾಸಿಂ ಪಟೇಲ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.