28ರಂದು ಜೈಕನ್ನಡಿಗರ ಸೇನೆಯಿಂದ ರಾಜ್ಯೋತ್ಸವ

ಕಲಬುರಗಿ,ನ.21- ನಗರದ ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಇದೇ ನ.28ರಂದು ಬೆಳಿಗ್ಗೆ 11ಗಂಟೆಗೆ ರಾಜ್ಯೋತ್ಸವ, ಪ್ರಶಸ್ತಿ ಪ್ರದಾನ, ಸಾಂಸ್ಕøತಿಕ ಉತ್ಸವ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೈಕನ್ನಡಿಗರ ಸೇನೆ ಸಂಸ್ಥಾಪಕ ಅಧ್ಯಕ್ಷ ದತ್ತು ಎಚ್.ಭಾಸಗಿ ಮತ್ತು ಗೌರವಾಧ್ಯಕ್ಷ ಜಗನ್ನಾಥ ಸೂರ್ಯವಂಶಿ ಅವರು ಹೇಳಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಸಾಂಸ್ಕøತಿಕ ಉತ್ಸವದಲ್ಲಿ ಜೊತೆಜೊತೆಯಲಿ ಖ್ಯಾತಿಯ ಚಲನ ಚಿತ್ರದ ಖ್ಯಾತನಟಿ ಮೇಘಾ ಶೆಟ್ಟಿ ಅವರು, ಪಾಲ್ಗೊಳ್ಳಲಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರಾದೇಶಭಿವೃದ್ದಿ ಮಂಡಳಿ ಅಧ್ಯಕ್ಷರಾದ ಶಾಸಕ ದತ್ತಾತ್ರೇಯ ಪಾಟೀಲ ರೇವು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಗಣಜಲಖೇಡದ ಪೂಜ್ಯ ನಾಗೇಶ ಸ್ವಾಮಿಜಿ ಸಾನಿಧ್ಯ ವಹಿಸುವರು. ಶಾಸಕರಾದ ಬಸವರಾಜ ಮತ್ತಿಮುಡು, ಖನಿಜ ಫಾತಿಮಾ, ಡಾ.ಅವಿನಾಶ ಜಾಧವ ಸೇರಿದಂತೆ ಗಣ್ಯಮಾನ್ಯರು ಭಾಗವಹಿಸಿಲಿದ್ದಾರೆ. ಕನ್ನಡ ಭಾಷೆ ಮತ್ತು ಸಂಸ್ಕøತಿಯ ಕುರಿತು ಸುರೇಶ ಬಡಿಗೇರ ಉಪನ್ಯಾಸ ನೀಡಲಿದ್ದಾರೆ.
ಸಾಧಕರಾದ ಡಾ.ವಿಕ್ರಮ ಸಿದ್ಧಾರೆಡ್ಡಿ, ಹಿರಿಯ ಪತ್ರಕರ್ತರಾದ ಶ್ರೀನಿವಾಸ ಸಿರನೂರಕರ್, ಬಸವರಾಜ ಕುಮನೂರ, ಡಾ.ಮಲ್ಲಿಕಾರ್ಜುನ ಶೆಟ್ಟಿ, ನಂದಿನಿ ಸಹನಾಬಾಲ, ಮೊಹ್ಮದ ಇಸ್ಮಾಯಿಲ್, ಅಶೋಕ ಕಾಳೆ, ಕೆ.ಎಸ್.ನಾಯಕ್, ಶಿವಪ್ಪ ಕಮಾಂಡೊ, ರಹೀಮಾನ ಖಾನ ಪಠಾಣ ಸೇರಿದಂತೆ ವಿವಿಧ ಕ್ಷೇತ್ರಗಳ 10ಜನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ಜಗನ್ನಾಥ ಸೂರ್ಯವಂಶಿ, ರಾಮಾ ಪೂಜಾರಿ, ಉಷಾನ್, ಮಲ್ಲು, ಮಲ್ಲಿಕಾರ್ಜುನ ನಂದೂರ ಸೇರಿದಂತೆ ಹಲವರಿದ್ದರು.