28ರಂದು ಎಕಂಬಾದಲ್ಲಿ ಶಿವಾಜಿ ಮೂರ್ತಿ ಅನಾವರಣ ಕಾರ್ಯಕ್ರಮ

ಬೀದರ್:ಮೇ.25: ಈ ತಿಂಗಳ 28ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಔರಾದ್ ತಾಲೂಕಿನ ಎಕಂಬಾ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಆಶ್ವರೂಢ ಮೂರ್ತಿ ಅನಾವರಣ ಕಾರ್ಯಕ್ರಮ ಜರುಗಲಿದೆ ಎಂದು ಗ್ರಾಮದ ಮುಖಂಡರಾದ ಪ್ರಥ್ವಿರಾಜ ಪಾಟೀಲ ತಿಳಿಸಿದರು.
ಶನಿವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಸಿಸಿ ಮಾತನಾಡಿರುವ ಅವರು, ಮೇ.24ರಿಂದಲೇ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಈ ತಿಂಗಳ 24ರಂದು ಗ್ರಾಮದೆಲ್ಲೆಡೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮ ಶುಚಿಯಾಗಿಸಲಾಯಿತು. ಜಾತಿ, ಮತ, ಪಮಥ ಹಾಗೂ ಪಂಗಡವೆಂಬ ಭೇದ ಮರೆತು ಈ ಕಾರ್ಯಕ್ರಮವನ್ನು ಗ್ರಾಮದ ಎಲ್ಲ ಸಮುದಾಯಗಳು ಒಗ್ಗೂಡಿ ಆಯೋಜಿಸಿವೆ. 25ರಂದು ಶನಿವಾರ ನುರಿತ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಲಲಾಯಿತು. ಶಿಬಿರದಲ್ಲಿ 100 ಜನ ಯುವಕರು ರಕ್ತದಾನ ಮಾಡಿದ್ದಾರೆ ಎಂದರು.
26ರಂದು ಸಾಯಂಕಾಲ ಅ.ಭ.ಪ ಅಧಿನಾಥ ಮಹಾರಾಜ ಅವರಿಂದ ಕೀರ್ತನ ಕಾರ್ಯಕ್ರಮ ಜರುಗಲಿದೆ. 27ರಂದು ಶಿವಶಾಹಿರ್ ರಾಜೇಂದ್ರ ಖಡುಸಕರ್ ಅವರಿಂದ ಭಾರೂಡ ಹಾಗೂ ಅವಿನಾಶ ಭಾರತಿ ಅವರಿಂದ ಭಾಷಣ ಕಾರ್ಯಕ್ರಮ ಜರುಗಲಿದೆ ಎಂದರು.
28ರಂದು ಮಂಗಳವಾರ ಸಾಯಂಕಾಲ 6 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜರ 13ನೇ ವಂಶಸ್ತರಾದ ಯುವರಾಜ ಸಾಂಬಾಜಿರಾಜೆ ಅವರಿಂದ ನೂತನವಾಗಿ ನಿರ್ಮಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಅಶ್ವರೂಢ ಮೂರ್ತಿ ಅನಾವರಣ ಕಾರ್ಯಕ್ರಮ ನೆರವೇರಿಸುವರು. ಬೆಂಗಳೂರಿನ ಪೂಜ್ಯ ಮಂಜುನಥ ಸ್ವಾಮಿಜಿ, ಶ್ರೀಕರ್ಣ ಗಜೇಂದ್ರ ಮಹಾರಾಜ ಹಾಗೂ ಸ್ಥಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ತುಳಸಾಬಾಯಿ ನಾಮದೇವ ಜಾಧವ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಛತ್ರಪತಿ ಶಿವಾಜಿ ಮಹಾರಾಜರು 18 ಜಾತಿ, ಜನಾಂಗದವರಿಗೆ ಆಶ್ರಯ ನೀಡಿದ ದೊರೆ. ಹಾಗಾಗಿ ಅವರ ಮೂರ್ತಿ ಅನಾವರಣದ ಈ ಅಪರೂಪ ಕಾರ್ಯಕ್ರಮಕ್ಕೆ ಎಲ್ಲ ಸಮುದಾಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪ್ರಥ್ವಿರಾಜ ಪಾಟೀಲ ಮನವಿ ಮಾಡಿದರು.
ಎಕಂಬಾ ಗ್ರಾಮ ಪ್ರಮುಖರಾದ ಆಕ್ಷಯ ಪಾಟೀಲ, ಸತೀಶ ವಾಸರೆ, ಡಾ.ಅಮಿತ ಹಂಗರಗೆ, ಗುಂಡಾಜಿ ಪಾಟೀಲ, ಧನರಾಜ ಪಾಟೀಲ, ಲಕ್ಷ್ಮಣ ಉಪಾಸೆ, ಸಂದೀಪ ನೇಳಗೆ ಪತ್ರಿಕಾ ಗೋಷ್ಟಿಯಲ್ಲಿದ್ದರು.