270ನೇ ಟಿಪ್ಪು ಸುಲ್ತಾನ್ ಜಯಂತೋತ್ಸವ ಸರಳ ಆಚರಣೆ

ಸೇಡಂ,ನ,20: ತಾಲೂಕಿನ ಮಳಖೇಡ ಗ್ರಾಮದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ 270ನೇ ಟಿಪ್ಪು ಸುಲ್ತಾನ್ ಜಯಂತೋತ್ಸವ ಗ್ರಾಮದ ಒಕ್ಕೂಟ ಸಂಘಟನೆಯವರಿಂದ ಸರಳವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ದಲಿತ ಸೇನೆಯ ತಾಲೂಕಾ ಅಧ್ಯಕ್ಷರಾದ ಅಂಬರೀಶ್ ಎಂ ಗುಡಿ ,ಭಗವಾನ್ ಬೊಚಿನ್, ಅಹ್ಮದ್ ಅಗಾ, ಫಯಾಜ್ ಇನಾಂದಾರ್, ಅಬ್ದುಲ್ ನಬಿ, ಅಝರ್ ರಂಜೋಳ್, ಸಚಿನ್ ಎಮ್ ಗುಡಿ, ಭಗವಾನ್, ಸಂತೋಷ್ ಸಂಗಾವಿ,ಆದಿತ್ಯ, ಬಸೀರ್,ಮಲ್ಲಿಕಾರ್ಜುನ ಮಹಾಂತೇಶ್ ಬೊಚಿನ್, ಗ್ರಾಮದ ಅನೇಕ ಯುವಕರು ಇದ್ದರು.