26 ರಂದು ರಾಜ್ಯ ಮಟ್ಟದ ಯುವ ಸಮಾವೇಶ


ಹುಬ್ಬಳ್ಳಿ,ಜೂ23: ರಾಜ್ಯದ ಎಸ್.ಎಸ್.ಕೆ ಸಮಾಜದ ವತಿಯಿಂದ ಜೂನ್ 26 ರಂದು ಇಲ್ಲಿನ ಗೋಕುಲ್ ರಸ್ತೆಯ ಕ್ಯೂಬಿಕ್ಸ್ ಹೊಟೆಲ್ ನಲ್ಲಿ ರಾಜ್ಯಮಟ್ಟದ ಯುವ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಎಸ್.ಎಸ್.ಕೆ ಸಮಾಜದ ಅಧ್ಯಕ್ಷ ಅಶೋಕ ಕಾಟವೆ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಸಮಾವೇಶವನ್ನು ಸಮಾಜದ ಯವಕರಿಗಾಗಿ ಹಮ್ಮಿಕೊಳ್ಳಲಾಗಿದೆ. ಅಂದು ಯುವ ಸಭಾವನ್ನು ಪ್ರಾರಂಭ ಮಾಡಲಾಗುವುದು. ರಾಜ್ಯದ ವಿವಿಧ ತಾಲೂಕಿನಿಂದ ಸುಮಾರು 500 ಕ್ಕೂ ಹೆಚ್ಚು ಯುವ ಪದಾಧಿಕಾರಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ಶೈಕ್ಷಣಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲಾಗುವುದು, ಅಲ್ಲದೇ ಯುವಕರು ಈ ಎಲ್ಲ ಕ್ಷೇತ್ರದಲ್ಲಿ ಪಾಲ್ಗೊಳ್ಳುವಿಕೆಗೆ ಪೆÇ್ರೀತ್ಸಹಿಸಲಾಗುವುದು ಎಂದರು.
ಇನ್ನೂ ಸಮಾವೇಶದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಶಂಕರಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ್, ಶ್ರೀನಿವಾಸ್ ಮಾನೆ, ಪ್ರಸಾದ್ ಅಬ್ಬಯ್ಯ ಸೇರಿದಂತೆ ಮುಂತಾದ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ನಿಲಕಂಠಸಾ ಜಡಿ, ನಾಗೇಶ ಕಲಬುರಗಿ, ಬಾಳು ಮಗಜಿಕೊಂಡಿ, ಗೋಪಾಲ ಬದ್ದಿ, ಸತೀಶ ಮೆಹರವಾಡೆ, ಪಿ.ಎಮ್.ಮೆಹರವಾಡೆ ಸೇರಿದಂತೆ ಮುಂತಾದವರು ಇದ್ದರು.