26 ರಂದು ತೋಟದತಾಯಿ ಜಾತ್ರೆ

(ಸಂಜೆವಾಣಿ ವಾರ್ತೆ)
ಇಂಡಿ :ಜು.25:ಪುರಸಭೆ ವ್ಯಾಪ್ತಿಯಲ್ಲಿ ಬರುವ ಸಾತಪೂರ ಗ್ರಾಮದ ತೋಟದತಾಯಿ ಜಾತ್ರಾ ಮಹೋತ್ಸವ 26 ಮತ್ತು 27 ರಂದು ಜರುಗಲಿದೆ ಎಂದು ಜಾತ್ರಾ ಸಮಿತಿ ಪ್ರಕÀಟಣೆಯಲ್ಲಿ ತಿಳಿಸಿದೆ.
26 ರಂದು ಬೆಳಗ್ಗೆ ಪೂಜೆ, ಅಭಿಷೇಕ್, ಗಂಗಾಶಿತಾಳ, ದೇವರಿಗೆ ಸದರ ಏರಿಸುವದು, ಸಂಜೆ 4 ಗಂಟೆಗೆ ಅನ್ನ ಪ್ರಸಾದ ನಡೆಯುವದು. ಅನ್ನಪ್ರಸಾದ ಎರಡು ದಿನಗಳ ವರೆಗೆ ನಿರಂತರ ನಡೆಯುವದು. ರಾತ್ರಿ 10 ಗಂಟೆಗೆ ಡೊಳ್ಳಿನ ಪದಗಳು ಜರುಗುವವು.
27 ರಂದು ಆಳೂರ ಗ್ರಾಮ, ಗಂಗಲಿಂಗ ಮುತ್ಯಾ ಸಾತಪೂರ, ಇಂಡಿಯ ನಿಂಗರಾಜ, ಹಂಜಗಿಯ ಈರ ಮುತ್ಯಾ, ಸಾತಪೂರದ ತೋಟದ ತಾಯಿ ಪಾಲಕಿ ಮೆರವಣೆಗೆ ಬುಧವಾರ 8 ಗಂಟೆಗೆ ಪ್ರಾರಂಭವಾಗುವದು.
ತದನಂತರ ಮಳೆ ಕುರಿತು ಹೇಳಿಕೆ, ಚಿಕ್ಕರೂಗಿ, ಬಳಗಾನೂರ ಗ್ರಾಮಸ್ಥರಿಂದ ಲಾಗಗಳು ಪಾಲ್ಗೊಳ್ಳುವವು ಎಂದು ಸಾತಪೂರ ಗ್ರಾಮದ ಸದ್ಭಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.