26 ರಂದು ಜಯತೀರ್ಥರ ಭಕ್ತರಿಂದ ಪ್ರತಿಭಟನೆ

ಕಲಬುರಗಿ,ಜೂ 23: ಕೆಲವರು ಸುಮ್ಮನೆ ಜಯತೀರ್ಥರ ವೃಂದಾವನ ವಿಷಯದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇದರಿಂದ ಲಕ್ಷಾಂತರ ಶ್ರೀಮದ್ಜಯತೀರ್ಥರ ಶಿಷ್ಯರುಗಳ ಮನಸ್ಸಿಗೆ ನೋವು ಕೊಡುವ ಕೆಲಸ ಮಾಡುತ್ತಿದ್ದಾರೆ.
ಈ ಕಾರಣದಿಂದ ಶ್ರೀ ಮದ್ಜಯತೀರ್ಥರು ಹಾಗೂ ಶ್ರೀ ರಘುವರ್ಯತೀರ್ಥರಿಗೆ ಅಪಮಾನ ಮಾಡಿದಂತೆ ಆಗುತ್ತಿದೆ. ಇದನ್ನು ತಡೆಯಲು ಜೂನ್ 26 ರಂದು ಜರುಗುವ ಪ್ರತಿಭಟನೆಯಲ್ಲಿ ಪಾರಾಯಣ ಸಂಘಗಳು, ಮಹಿಳಾ ಭಜನಾ ಮಂಡಳಿಗಳು,ಎಲ್ಲಾ ವಿಪ್ರ ಸಂಘಟನೆಗಳು ಬೆಂಬಲ ಸೂಚಿಸಿದ್ದಾರೆ ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಜಿಲ್ಲಾಧ್ಯಕ್ಷರಾದ ರವಿ ಲಾತೂರಕರ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10 ಗಂಟೆಗೆ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ಯೊಂದಿಗೆ ತೆರಳಿ ಮನವಿ ಸಲ್ಲಿಸಲಾಗುವುದು.
ಪಂಡಿತ ಗೋಪಾಲ್ ಆಚಾರ್ಯ ಅಕಮಂಚಿ, ಗುಂಡಾಚಾರ್ಯ ಜೋಶಿ ನರಬೋಳ,ಪಂಡಿತ ಪ್ರಸನ್ನ ಆಚಾರ್ಯ ಜೋಶಿ, ಪದ್ಮನಾಭ ಆಚಾರ್ಯ ಜೋಶಿ, ವಿ. ಮ. ಮ. ಪ ಮಾಜಿ ಅಧ್ಯಕ್ಷರಾದ ರಾಮಾಚಾರ್ಯ ಮೊಗರೆ, ಅನೂಪ್ ಅಳಂದಕರ, ಶ್ರೀನಿವಾಸ ನೆಲೋಗಿ ಸೇರಿದಂತೆ ಅನೇಕರು ಬೆಂಬಲ ಸೂಚಿಸಿದ್ದಾರೆ.