26ರಂದು ಗೋರ್ಟಾ ಹುತಾತ್ಮ ಸ್ಮಾರಕ ಲೋಕಾರ್ಪಣೆ: ತುಳಸಿ ಮುನಿರಾಜು ಗೌಡ

ಬೀದರ್:ಮಾ.24: ಎರಡನೆ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಎಂದ ಕರೆಯಲ್ಪಡುವ ಬಸವಕಲ್ಯಾಣ ತಾಲೂಕಿನ ಗೋರ್ಟಾ(ಬಿ) ಗ್ರಾಮದಲ್ಲಿ ನಿರ್ಮಿಸಲಾದ ಹುತಾತ್ಮರ ಸ್ಮಾರಕವನ್ನು ನವ ಭಾರತದ ಚಾಣಕ್ಯ ಎಂದೆ ಕರೆಯಲ್ಪಡುವ ಅಮಿತ ಶಾ ಅವರು ಲೋಕಾರ್ಪಣೆಗೊಳಿಸುವರು ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜು ಗೌಡ ಹೇಳಿದರು.
ಗೋರ್ಟಾದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, 35 ಅಡಿ ಉದ್ದದ ಹಾಗೂ 40 ಟನ್ ತೂಕದ ಸ್ಮಾರಕ ನಿರ್ಮಿಸಲಾಗಿದ್ದು ಅದನ್ನು ಉದ್ಘಾಟಿಸಲಿದ್ದಾರೆ. ನೆಲದಿಂದ ಹಿಡಿದು 25 ಅಡಿ ಎತ್ತರದ ಕಂಚಿನ 1100 ಕಿಲೋ ತೂಕದ ಕಂಚಿನ ಸರ್ದಾರ ವಲ್ಲಭಭಾಯಿ ಪಟೇಲರ ಕಂಚಿನ ಮೂರ್ತಿ ಅನಾವರಣಗೊಳಿಸುವರು. ಹಾಗೆ 103 ಅಡಿ ಎತ್ತರದ ರಾಷ್ಟ್ರಧ್ವಜ ಸ್ಥಂಭ ಅದರಲ್ಲಿ 2್ಠ030 ಅಡಿ ಉದ್ದದ ರಾಷ್ಟ್ರಧ್ವಜ ನೆರವೇರಿಸುವರು ಎಂದರು.
ಇದಕ್ಕೂ ಮುಂಚೆ ಗೋರ್ಟಾ ಗ್ರಾಮದಲ್ಲಿ ಹುತಾತ್ಮರಾದ ಮನೆಗಳಿಗೆ ಭೇಟಿ ನೀಡಿ ಆ ಕುಟುಂಬದವರೊಂದಿಗೆ ಸಂದರ್ಶನ ನಡೆಸುವರು. 200 ಜನ ಹುತಾತ್ಮರನ್ನು ಹತ್ಯೆಗೈದ ಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವರು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪುರ್ವ ಸಿಎಂ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾದ್ಯಕ್ಷ ನಳಿನಕುಮಾರ ಕಟೀಲ, ಕೇಂದ್ರ ಸಚಿವ ಭಗಚಂತ ಖೂಬಾ, ಸಚಿವರಾದ ಪ್ರಭು ಚವ್ಹಾಣ, ಸ್ಥಳಿಯ ಶಾಸಕ ಶರಣು ಸಲಗಾರ ಭಾಗವಹಿಸುವರು ಎಂದರು.