26ನೇ ದಿನಕ್ಕೆ ಅತಿಥಿ ಉಪನ್ಯಾಸಕರ ಧರಣಿ

ಕೋಲಾರ,ಡಿ.೨೧- ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ ವತಿಯಿಂದ ಇಡೀ ರಾಜ್ಯಾದ್ಯಂತ ನವಂಬರ್ ೨೪ ರಿಂದ ನಡೆಯುತ್ತಿರುವ ಧರಣಿ ಇಂದಿಗೆ ೨೬ ದಿನಕ್ಕೆ ಕಾಲಿಟ್ಟಿದೆ.
ಆದರೆ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಒಂದು ಕಡೆ ಕೋಲಾರ ಜಿಲ್ಲೆಯಲ್ಲಿ ೧೧ ಡಿಗ್ರಿ ಕಾಲೇಜುಗಳಿವೆ. ಕಳೆದ ಒಂದು ತಿಂಗಳಿಂದ ಪಾಠ ಪ್ರವಚನಗಳಲ್ಲಿದೆ ವಿದ್ಯಾರ್ಥಿಗಳು ಅಲೆದಾಡುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ತನಗೂ ಇದಕ್ಕೂ ಸಂಬಂಧವಿಲ್ಲದಂತೆ ವರ್ತಿಸಿರುವುದನ್ನ ರಾಜ್ಯ ಅಧ್ಯಕ್ಷ ನಾಗನಾಳ ಮುನಿಯಪ್ಪ ತೀವ್ರವಾಗಿ ಖಂಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಗುರುವಾರ ಸಂಜೆ ತನಕ ಕಾದು ನೋಡುವ ಗಡುವು ನೀಡಿದ್ದು, ಯಾವುದೇ ತೀರ್ಮಾನ ತೆಗೆದುಕೊಳ್ಳದಿದ್ದರೆ ಮುಖ್ಯಮಂತ್ರಿಗಳ ಮನೆ ಮುಂದೆ ನಮ್ಮಗಳ ಕುಟುಂಬ ಸಮೇತ ಅಹೋರಾತ್ರಿ ಧರಣಿ ಕುಳಿತುಕೊಳ್ಳುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎ.ಬಿ ರಮೇಶ, ರಮಾನಂದ, ಬಾಲಾಜಿ, ಶ್ರೀನಿವಾಸ್, ನೂರಾಹಮದ್, ಸುಮಿತ್ರ, ವೇಣು, ಚೇತನ, ವೆಂಕಟೇಶ್, ಅಮರಾವತಿ, ಕೆ.ಎನ್.ತ್ಯಾಗರಾಜ್, ಎಂ.ರವಿಂದ್ರ ಮುಂತಾದವರು ಇದ್ದರು.