250 ರೂ. ಗೆ ಜೈವಿಕ ಲಸಿಕೆ

ಹೈದರಾಬಾದ್, ಜೂ.೫- ದೇಶದಲ್ಲಿ ಕೊರೋನೋ ಸೋಂಕಿಗೆ ಅಭಿವೃದ್ಧಿಪಡಿಸಲಾಗಿರುವ ಎರಡನೇ ದೇಶೀಯ ಲಸಿಕೆ ಜೈವಿಕ- ಇ ಪ್ರತಿ ಡೋಸ್ ಗೆ ೨೫೦ ರೂಪಾಯಿಗೆ ಸಿಗುವ ಸಾಧ್ಯತೆಗಳು ಹೆಚ್ಚಾಗಿದೆ.
೨೫೦ ರೂಪಾಯಿಗೆ ಪ್ರತಿ ಡೋಸ್ ಲಸಿಕೆ ಸಿಕ್ಕರೆ ದೇಶದಲ್ಲಿ ಅತಿ ಕಡಿಮೆ ದರದಲ್ಲಿ ಲಸಿಕೆ ಸಿಕ್ಕಂತಾಗಲಿದೆ.
ಜೈವಿಕ – ಇ ಲಸಿಕೆ ಕಾರ್ಬೋವಾಕ್ಸ್ ಲಸಿಕೆಯನ್ನು ಹೈದರಾಬಾದ್ ಮೂಲದ ಔಷಧ ತಯಾರಿಕಾ ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆ. ದೇಶೀಯವಾಗಿ ತಯಾರಾಗುತ್ತಿರುವ ಈ ಲಸಿಕೆಗೆ ಕೇಂದ್ರ ಸರ್ಕಾರ ಮುಂಗಡವಾಗಿ ಒಂದುವರೆ ಸಾವಿರ ಕೋಟಿ ರೂಪಾಯಿ ನೀಡಲು ಕೂಡ ನಿರ್ಧರಿಸಿದೆ.
ಲಸಿಕೆ ಮಾರುಕಟ್ಟೆಗೆ ಬಂದ ನಂತರ ಅತಿ ಕಡಿಮೆ ದರದಲ್ಲಿ ಸಿಗುವ ಸಾಧ್ಯತೆಗಳು ಹೆಚ್ಚು ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ಮಾರುಕಟ್ಟೆಯಲ್ಲಿ ಪ್ರತಿ ಡೋಸ್ ಬೆಲೆ ೪೦೦ ರೂಪಾಯಿ ಮತ್ತು ೫೦೦ ರೂಪಾಯಿಗೆ ದೊರೆಯಲಿದ್ದು ಸರ್ಕಾರಕ್ಕೆ ಸರ್ಕಾಕ್ಕೆ ೨೫೦ ನೀಡುವ ಎಲ್ಲಾ ಸಾಧ್ಯತೆಗಳು ಇವೆ.
ಭಾರತೀಯ ಸೆರಂ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಕೋವಿ ಶೀಲ್ಡ್ ಲಸಿಕೆಯನ್ನು ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್ ೩೦೦ ರೂಪಾಯಿ ಹಾಗು ಖಾಸಗಿಯವರಿಗೆ ಪ್ರತಿ ಡೋಸ್ ಗೆ ೬೦೦ ರೂಪಾಯಿ ದರದಲ್ಲಿ ನೀಡಲಾಗುತ್ತಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆಯನ್ನು ರಾಜ್ಯ ಸರ್ಕಾರಗಳಿಗೆ ನಾನೂರು ರೂಪಾಯಿ ಹಾಗೂ ಮಾರುಕಟ್ಟೆಯಲ್ಲಿ ೧೨೦೦ ರೂಪಾಯಿಗೆ ನೀಡುತ್ತಿದೆ..

ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ವಿ ಲಸಿಕೆ ಯನ್ನು ದೇಶದಲ್ಲಿ ಪ್ರತಿ ಡೋಸ್ ಗೆ ೯೯೫ ರೂಪಾಯಿ ದರ ನಿಗದಿ ಮಾಡಲಾಗಿದೆ. ಎಲ್ಲ ಲಸಿಕೆ ಗಳಿಗಿಂತ ಜೈವಿಕ – ಇ ಲಸಿಕೆ ಅತ್ಯಂತ ಕಡಿಮೆ ದರದಲ್ಲಿ ಜನರಿಗೆ ಲಭ್ಯವಾಗಲಿದೆ

ಯಾವ ಲಸಿಕೆಗೆ ಎಷ್ಟು

ಲಸಿಕೆ, ರಾಜ್ಯ ಸರ್ಕಾರ -ಖಾಸಗೀ ಆಸ್ಪತ್ರೆ

  • ಕೋವಿಶೀಲ್ಡ್ – ೩೦೦ ರೂ ಪ್ರತಿ ಡೋಸ್, – ೬೦೦ ,ರೂ
  • ಕೊವಾಕ್ಸಿನ್ – ೪೦೦ ರೂ ಪ್ರತಿ ಡೋಸ್, ೧೨೦೦ ಖಾಸಗಿ ಆಸ್ಪತ್ರೆ
  • ಸ್ಪಟ್ನಿಕ್ -ವಿ – ೯೯೫ ರೂ ಪ್ರತಿ ಡೋಸ್ ನಿಗಧಿ
  • ಜೈವಿಕ- ಇ – ೨೫೦ ರೂಪಾಯಿ , ೪೦೦ ರೂಪಾಯಿ ಪ್ರತಿ ಡೋಸ್ ಗೆ