250 ಕೆಜಿ ಪ್ಲಾಸ್ಟಿಕ್ ವಶ

ನಂಜನಗೂಡು:ಏ:06: ಬೆಳ್ಳಂಬೆಳಗ್ಗೆ ನಗರಸಭೆ ಅಧಿಕಾರಿಗಳಿಂದ ಆರ್ ಪಿ ರಸ್ತೆಯಲ್ಲಿರುವ ಸೂಪರ್ ಮಾರ್ಕೆಟ್ ಮತ್ತು ಅಕ್ಕಪಕ್ಕದ ಅಂಗಡಿಗಳ ಮೇಲೆ ದಾಳಿ 250 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡರು ಸ್ಥಳದಲ್ಲೇ ದಂಡ ಹಾಕಿ ಪ್ಲಾಸ್ಟಿಕ್ ಮುಂದಿನ ದಿನಗಳಲ್ಲಿ ಮಾರದಂತೆ ಎಚ್ಚರಿಕೆ ನೀಡಿದರು.
ಸ್ವಯಂ ಸಂಘಗಳಿಂದ ತಯಾರು ಮಾಡಿರುವ ಬಟ್ಟೆ ಬ್ಯಾಗ್‍ಗಳನ್ನು ಅಂಗಡಿಯವರಿಗೆ ವ್ಯಾಪಾರ ಮಾಡಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳಾದ ಮೈತ್ರಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ರೇಖಾ, ಅಶೋಕ್ ಸೇರಿದಂತೆ ಇತರರಿದ್ದರು.