25.00 ಕೋಟಿ ರೂ ವೆಚ್ಚದ ಸಿಆರ್‌ಸಿ ಕಟ್ಟಡ ಉದ್ಘಾಟನೆ : ಸಂಸದ ಜಿ.ಎಂ.ಸಿದ್ದೇಶ್ವರ

ಸಂಜೆವಾಣಿ ವಾರ್ತೆ

ದಾವಣಗೆರೆ. ಫೆ.೨೦; ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ವತಿಯಿಂದ ದಿವ್ಯಾಂಗರ ಚಿಕಿತ್ಸೆ ಹಾಗೂ ಪುನರ್ವಸತಿಗಾಗಿ ದಾವಣಗೆರೆ ನಗರದ ವೊಡ್ಡಿನಹಳ್ಳಿ ಬಳಿ ಸಂಯುಕ್ತ ಪ್ರಾದೇಶಿಕ ಚಿಕಿತ್ಸಾ ಕೇಂದ್ರಕ್ಕಾಗಿ 9 ಎಕರೆ ಸರ್ಕಾರಿ ಜಾಗ ನೀಡಲಾಗಿದೆ, ಈ ಸ್ಥಳದಲ್ಲಿ ರೂ.25.00 ಕೋಟಿ ವೆಚ್ಚದಲ್ಲಿ ಪ್ರಾದೇಶಿಕ ಚಿಕಿತ್ಸಾ ಕೇಂದ್ರ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಒಟ್ಟಾರೆಯಾಗಿ ಈ ಸಂಸ್ಥೆಗೆ ವೊಡ್ಡಿನಹಳ್ಳಿ ಬಳಿ 9 ಎಕರೆ ಹಾಗೂ ಕೊಗ್ಗನೂರು ಬಳಿ 7.23 ಎಕರೆ ಹೀಗೆ ಒಟ್ಟು 16.23 ಎಕರೆ ಜಮೀನನ್ನು ನೀಡಲಾಗಿದೆ.ಕರ್ನಾಟಕ ಮತ್ತು ಗೋವಾ ಈ ಎರಡೂ ರಾಜ್ಯಗಳಿಗೆ ಸೇರಿದಂತೆ ವಿಶೇಷ ಚೇತನ ವ್ಯಕ್ತಿಗಳಿಗೆ ಸೇವೆಯನ್ನು ಒದಗಿಸಲು ದಾವಣಗೆರೆಯಲ್ಲಿ 2017 ರ ಫೆಬ್ರವರಿ 17 ರಂದು ಕಾರ್ಯ ಆರಂಭ ಮಾಡಿದೆ. ಇಲ್ಲಿಯವರೆಗೆ ಸುಮಾರು 38557 ಜನರು ಜನರಿಗೆ ಶಾರ್ಟ್ ಟರ್ಮ್ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿಯವರೆಗೆ ಸುಮಾರು 7 ಸಾವಿರಕ್ಕೂ ಹೆಚ್ಚು ದಿವ್ಯಾಂಗರು ವಿಶೇಷ ತರಬೇತಿಗೆ ನೊಂದಾಯಿಸಿಕೊAಡಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಸುಮಾರು 3212 ಜನರಿಗೆ ವೀಲ್ ಚೇರ್, ಶ್ರವಣ ಯಂತ್ರಗಳನ್ನು ವಿತರಣೆ ಮಾಡಲಾಗಿದೆ. 2019 ರಿಂದ ದಾವಣಗೆರೆ ಸಿಆರ್‌ಸಿ ಕೇಂದ್ರ 2 ಡಿಪ್ಲಮೋ ಕೋರ್ಸುಗಳನ್ನು ನಡೆಸುತ್ತಿದೆ.ಇಂತಹ ಬಹುಮುಖಿ ಕೇಂದ್ರ ದಿನಾಂಕ 21.02.2024 ರ ಬುಧವಾರದಂದು ಮಧ್ಯಾಹ್ನ 1.00 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ  ವೀರೇಂದ್ರಕುಮಾರ್‌ರವರು ವರ್ಚುಯಲ್ ಮೂಲಕ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ಆ ದಿನ ಸಿಆರ್‌ಸಿ ಕಟ್ಟಡದ ಬಳಿ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ಉದ್ಘಾಟನಾ ಸಮಾರಂಭವನ್ನು ನಾವೆಲ್ಲರೂ ಸಾಕ್ಷೀಕರಿಸಲಿದ್ದೇವೆ.