25 ರಂದು ವೀರಭದ್ರ ಸ್ವಾಮಿಯ ವಿಶೇಷ ಪೂಜೆ

ಸಂಜೆವಾಣಿ ವಾರ್ತೆ

ಹಿರಿಯೂರು ಮಾ 26- ಶ್ರೀಭದ್ರಕಾಳೇಶ್ವರ ಸಮೇತ ಶ್ರೀ ವೀರಭದ್ರ ಸ್ವಾಮಿಯವರ ಜಾತ್ರಾ ಮಹೋತ್ಸವದ ಪ್ರಯುಕ್ತ ದಿನಾಂಕ 25 ರ ಸೋಮವಾರ ಬೆಳಿಗ್ಗೆ 8:30 ರಿಂದ ಸ್ವಾಮಿಯವರಿಗೆ ಹಾಗೂ ಅಮ್ಮನವರಿಗೆ ವಿಶೇಷ ರುದ್ರಭಿಷೇಕ ಪಂಚಾಮೃತ ಅಭಿಷೇಕ ಅಲಂಕಾರ ಅರ್ಚನೆ ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ  ವಿನಿಯೋಗ ಏರ್ಪಡಿಸಲಾಗಿದೆ.ಭಕ್ತ ಮಹಾಶಯರು ಈ ಪೂಜಾ ಕಾರ್ಯಕ್ರಮಕ್ಕೆ ಭಾಗವಹಿಸಿ ತನುಮನ ಧನದೊಂದಿಗೆ ಸಹಕರಿಸಿ ಸ್ವಾಮಿ ಯವರ ಹಾಗೂ ಅಮ್ಮನವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಪೂಜಾ ಕಾರ್ಯಕ್ರಮ ಸಂಯೋಜಕರು ಮನವಿ ಮಾಡಿದ್ದಾರೆ