25 ಪ್ರಗತಿಪರ ರೈತರಿಗೆ “ನೇಗಿಲಯೋಗಿ ಪ್ರಶಸ್ತಿ” ಪ್ರದಾನರೈತರು ಆಧುನಿಕ ಕೃಷಿಯಡೆಗೆ ಬರಬೇಕು

ವಿಜಯಪುರ :ಮಾ.30: ಮಳೆಯನ್ನೆ ನೆಚ್ಚಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಮಧ್ಯವರ್ತಿಗಳ ಕಾಟ ಇಲ್ಲದೇ ಸೂಕ್ತ ಬೆಲೆ ಸಿಗಬೇಕು ಎನ್ನುವ ಉದ್ದೇಶದಿಂದ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ, ಇಂದಿನ ಆಧುನಿಕ ಕೃಷಿ ಪದ್ಧತಿಗೆ ರೈತರು ಬರಬೇಕು, ಹೊಸ ಹೊಸ ತಂತ್ರಜ್ಞಾನ ಮತ್ತು ಹೊಸ ಬಗೆಯ ಕೃಷಿ ಪದ್ಧತಿ ಅಳವಡಿಸಿಕೊಂಡಾಗ ಮಾತ್ರ ರೈತ ಆತ್ಮಹತ್ಯೆಯಂತಹ ಜ್ವಲಂತ ಸಮಸ್ಯೆ ಬಗೆಹರೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ವಿಜಯ ಮಹಾಂತೇಶ ದಾನಮ್ಮನವರ ಬೃಹತ್ ರೈತ ಜಾಗೃತಿ ಸಮಾವೇಶದಲ್ಲಿ ಸಸಿಗೆ ನೀರುಣಿಸುವ ಮೂಲಕ ರೈತರನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಕಂದಗಲ ಹಣಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಬೃಹತ್ ರೈತ ಜಾಗೃತಿ ಸಮಾವೇಶ ಹಾಗೂ ಪ್ರಗತಿಪರ ರೈತ ಸಾಧಕರಿಗೆ ನೇಗಿಲಯೋಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ರೈತರಿಗೆ ಸರಕಾರ ಹಲವಾರು ಯೋಜನೆಗಳನ್ನು ತಂದಿದೆ, ರೈತರ ಆದಾಯ ದ್ವೀಗುಣ ಮಾಡುವ ನಿಟ್ಟಿನಲ್ಲಿ ಸದಾ ಕಾರ್ಯಪ್ರವೃತ್‍ವಾಗಿದೆ, ಇದರ ಲಾಭವನ್ನು ಎಲ್ಲಾ ರೈತ ಬಾಂಧವರು ಪಡೆದುಕೊಳ್ಳಿ ಎಂದು ಮಾತನಾಡಿದರು.

ಹಸಿರು ಧ್ವಜ, ಟೋಪಿ, ಶಾಲುಹಾಕಿಕೊಂಡಿರುವ ಸಾವಿರಾರು ರೈತರು ನಗರದ ಸಿದ್ದೇಶ್ವರ ದೇವಸ್ಥಾನದಿಂದ ಬೃಹತ್ ರೈತ ಶೋಭಾಯಾತ್ರೆಯಲ್ಲಿ ಶೃಂಗಾರಗೊಂಡ ಎತ್ತಿನಬಂಡಿಯ ಸಮೇತ ವಿವಿಧ ಘೋಷಣೆಗಳನ್ನು ಕೂಗುತ್ತಾ ಗಾಂಧಿವೃತ್‍ದ ಮಾರ್ಗವಾಗಿ ಕಂದಗಲ ಹಣಮಂತರಾಯ ರಂಗಮಂದಿರದ ಕಡೆ ಹೆಜ್ಜೆ ಹಾಕಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಚುನ್ನಪ್ಪಾ ಪೂಜೇರಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ವಿಜಯಪುರ ಜಿಲ್ಲೆಯಲ್ಲಿ ರೈತರ ಹಲವಾರು ಸಮಸ್ಯೆಗಳು ತಾಂಡವಾಡುತ್ತಿವೆ, ಅವುಗಳನ್ನು ಪರಿಹರಿಸಿಕೊಳ್ಳಬೇಕಾದರೆ ಈ ರೀತಿಯ ರೈತರ ಸಂಘಟನೆ ಅವಶ್ಯಕ, ವ್ಯಥಾ ಸಮಯ ಹಾಳುಮಾಡದೇ ಈರೀತಿಯ ರೈತರ ಸಭೆ, ಹೋರಾಟ, ಸಮಾವೇಶ, ತರಬೇತಿಗಳನ್ನು ಹಮ್ಮಿಕೊಂಡು ಕಡಿಮೆ ಖರ್ಚಿನಲ್ಲಿ ಯಾವ ರೀತಿ ಬೆಳೆ ಬೇಳೆಯಬೇಕು, ಸಾವಯವ ಕೃಷಿ ಪದ್ದತಿ ಅಳವಡಿಸಿಕೊಂಡರೆ, ಖರ್ಚು ಕಡಿಮೆಯಾಗುವುದಲ್ಲದೇ ಆರೋಗ್ಯವು ಉತ್ತಮವಾಗುತ್ತದೆ, ರೈತರದೇ ಒಂದು ಮಾರುಕಟ್ಟೆ ಸೃಷ್ಟಿಮಾಡಿ ಯೋಗ್ಯ ಬೆಲೆ ನಾವೇ ನಿರ್ಣಯಿಸುವಂತಾಗಬೇಕು. ಆಗ ರೈತ ಆರ್ಥಿಕವಾಗಿ ಸದೃಡನಾಗಿ ಯಾವ ಸಾಲಕ್ಕೂ ಕೈ ಚಾಚುವ ಪ್ರಶ್ನೆಯೇ ಬರುವುದಿಲ್ಲ ಎಂದರು.

ಈ ವೇಳೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರೂಪಾ. ಎಲ್, ರಾಜ್ಯ ಗೌರವಾಧ್ಯಕ್ಷರಾದ ಶಶಿಕಾಂತ ಪಡಸಲಗಿ, ದಿವ್ಯ ಸಾನಿಧ್ಯ ವಹಿಸಿದ ಸಿದ್ಧಲಿಂಗ ಸ್ವಾಮಿಜಿ, ಉತ್ತರ ಕರ್ನಾಟಕದ ಅಧ್ಯಕ್ಷರಾದ ಗಣೇಶ ಈಳಗೇರ, ಉತ್ತರ ಕಾರ್ನಟಕದ ಕಾರ್ಯಾಧ್ಯಕ್ಷರಾದ ಮಹೇಶಗೌಡ ಸುಬೇದಾರ, ಪ್ರಾಸ್ಥಾವಿಕವಾಗಿ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಮಾತನಾಡಿದರು.

ಇದೇ ವೇಳೆ ರಾಜ್ಯ ಪ್ರಧಾನಕಾರ್ಯದರ್ಶಿಗಳಾದ ರಾಹುಲ ಕುಬಕಡ್ಡಿ ಕೃಷಿಯಲ್ಲಿ ವಿನೂತನ ಸಾಧನೆ ಮಾಡಿರುವ ಸುಮಾರು 25 ಜನ ಪ್ರಗತಿಪರ ರೈತರಿಗೆ ನೇಗಿಲಯೋಗಿ ಪ್ರಶಸ್ತಿ ಕೊಟ್ಟು ಗೌರವಿಸವ ವೇಳೆ ಸಾಧಕರನ್ನು ಗುರುತಿಸಿ ಸನ್ಮಾನಿಸುವುದರಿಂದ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದರು.

ಈ ವೇಳೆ ರಾಜ್ಯ ಉಪಾಧ್ಯಕ್ಷರಾದ ಮಲ್ಲನಗೌಡ ಪಾಟೀಲ, ರಾಜ್ಯ ಉಪಾಧ್ಯಕ್ಷರಾದ ಎಂ.ಆರ್.ಗುರಿಕಾರ, ಉ.ಕ ಕಾರ್ಯದರ್ಶಿಗಳಾದ ಮಹೇಶ ಪಾಟೀಲ ಆಲೂರ, ಜಿಲ್ಲಾಧ್ಯಕ್ಷರಾದ ಚಂದ್ರಗೌಡ ಪಾಟೀಲ, ರಾಯಚೂರ ಜಿಲ್ಲಾಧ್ಯಕ್ಷರಾದ ಶರಣಪ್ಪ ಮರಳಿ, ಯಾದಗಿರಿ ಜಿಲ್ಲಾಧ್ಯಕ್ಷರಾದ ಚಂದನಗೌಡ ಮಾಲಿಪಾಟೀಲ, ವಿರೇಶ ಗೊಬ್ಬುರ, ಪ್ರತಾಪ ನಾಗರಗೋಜಿ, ರಾಮನಗೌಡ ಪಾಟೀಲ, ಕಲ್ಲಪ್ಪ ಪಾರಶೆಟ್ಟಿ, ಶ್ರೀಶೈಲ ಮುಳಜಿ, ನಜೀರ ನಂದರಗಿ, ಬೆಳಗಾವಿ ಮಹಿಳಾ ಜಿಲ್ಲಾಧ್ಯಕ್ಷರಾದ ಆಶಾ ಜೂಟದರ್, ರೇಖಾ ಪಾಟೀಲ, ವಿಜಯಲಕ್ಷ್ಮೀ ಗಾಯಕವಾಡ, ದಾನಮ್ಮ ತೆಗ್ಗಿನಮಠ, ಸವಿತಾ ವಾಲಿಕಾರ, ಸೇರಿದಂತೆ ಎಲ್ಲಾ 13 ತಾಲೂಕಿನ ಅಧ್ಯಕ್ಷರುಗಳು, ಪದಾಧಿಕಾರಿಗಳು, ರೈತರು ರೈತ ಮುಖಂಡರು ಉಪಸ್ಥಿತರಿದ್ದರು.