25 ಪದಕ ಗೆದ್ದ ಸಿಐಎಸ್‍ಸಿಇ ರಾಜ್ಯ ಬಾಕ್ಸಿಂಗ್ ತಂಡ

ಕಲಬುರಗಿ ಸೆ 8: ಸಿಐಎಸ್‍ಸಿಇ ಕರ್ನಾಟಕ ರಾಜ್ಯ ಬಾಕ್ಸಿಂಗ್ ತಂಡವು ಸೆ 1 ರಿಂದ 3 ರವರೆಗೆ ಜಮಶೆಡ್‍ಪುರದಲ್ಲಿ ಜರುಗಿದ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‍ಶಿಫ್ ಪಂದ್ಯಾವಳಿಯಲ್ಲಿ 25 ಪದಕಗಳನ್ನು ಗೆಲ್ಲುವ ಮೂಲಕ ಅಮೋಘ ಸಾಧನೆ ಮಾಡಿದೆ.
14 ವರ್ಷದೊಳಗಿನ ಕರ್ನಾಟಕ ರಾಜ್ಯ ತಂಡವು ಟೀಮ್ ಚಾಂಪಿಯನ್‍ಶಿಫ್ ಅವಾರ್ಡ ಪಡೆದಿದೆ.
ಸಿಐಎಸ್‍ಸಿಇ ಕರ್ನಾಟಕ ರಾಜ್ಯ ಬಾಕ್ಸಿಂಗ್ ತಂಡವು 9 ಚಿನ್ನದ ಪದಕ,11 ಬೆಳ್ಳಿಯ ಪದಕ ಮತ್ತು 5 ಕಂಚಿನ ಪದಕ ಪಡೆದಿದೆ.
ಬಾಕ್ಸರುಗಳಾದ ಸಾಯಿ ಚರಣ್ ಎಚ್,ಯಾಹ್ಯಾಖಾನ್,ನಿಶಾ ಎಸ್,ಲಿಖಿತ್ ವಿ,ರೋಹನ್ ಆರ್,ಅರ್ಯಕಿ ಗುಪ್ತಾ,ರೋಹನ್ ಟಿ, ರಜನೀಶ ಗೌಂಡರ್ ಅನಿಕಾ ಪ್ರೀಮಾ ಅವರು ಚಿನ್ನದ ಪದಕ ಪಡೆದರು.ನಿಸರ್ಗ ಎ. ರುಬಿಡಿ ಅವರು ಬೆಳ್ಳಿ ಪದಕ ಪಡೆದರು.ಅದಿಥಿ ಭವೆತ್ ಆರ್ ಸೇರಿದಂತೆ ಅನೇಕ ಪ್ರತಿಭಾನ್ವಿತ ಕ್ರೀಡಾಪಟುಗಳು ಭಾಗಿಯಾದರು.
ಕೋಚ್ ಮತ್ತು ಮ್ಯಾನೇಜರ್ ಅನೀಲಕುಮಾರ್ ಎಲ್, ಕೋಚ್ ಗಳಾದ ಗಿರಿಧರನ್, ಎಸ್.ಐ ಬಾಬು, ಉಮಾಮಹೇಶ್ವರಿ ಅವರು ತಂಡದೊಂದಿಗಿದ್ದರು.