25 ದಿವಸಗಳ ವಿನ್ಯಾಸ ಮತ್ತು ತಾಂತ್ರಿಕ ಅಭಿವೃದ್ಧಿ ಕಾರ್ಯಾಗಾರ ಸಂಪನ್ನ

ಬೀದರ:ನ.25: ಬ್ಲ್ಯಾಕ್ ಗೋಲ್ಡ್ ಬಿದ್ರಿ ಕುಶಲಕರ್ಮಿಗಳ ಉತ್ಪಾದಕರ ಕಂಪನಿ ನಿಯಮಿತ, ಬೀದರ ವತಿಯಿಂದ ಬೀದರ ನಗರದ ಬಿದ್ರಿ ಕಾಲೋನಿಯ ಸಿ.ಎಫ್.ಸಿ.ಯಲ್ಲಿ ಬಿದ್ರಿ ಕುಶಳಕರ್ಮಿಗಳಿಗಾಗಿ ಹಮ್ಮಿಕೊಂಡ 25 ದಿವಸಗಳ ವಿನ್ಯಾಸ ಮತ್ತು ತಾಂತ್ರಿಕ ಅಭಿವೃದ್ಧಿ ಕಾರ್ಯಾಗಾರದ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ, ಶ್ರೀ ಸುಶೀಲಕುಮಾರ, ಕರ ಕುಶಲ ಅಭಿವೃದ್ಧಿ ಅಧಿಕಾರಿ, ಅಭಿವೃದ್ಧಿ ಆಯುಕ್ತರ (ಹಸ್ತಶಿಲ್ಪ) ಕಚೇರಿ, ಧಾರವಾಡ ಇವರು ಭಾಗವಹಿಸಿ ಮಾತನಾಡುತ್ತ – 25 ದಿನಗಳಲ್ಲಿ ಹೊಸ ವಿನ್ಯಾಸದ ಬಿದ್ರಿ ವಸ್ತುಗಳನ್ನು ತಯಾರಿಸಿದಕ್ಕೆ ಹರ್ಷ ವ್ಯಕ್ತಪಡಿಸಿದರು. ಈ ಹೊಸ ವಿನ್ಯಾಸದ ಬಿದ್ರಿ ವಸ್ತುಗಳು ಮಾರುಕಟ್ಟೆಯಲ್ಲಿ ಹಾಗೂ ವಸ್ತು ಪ್ರದರ್ಶನಗಳಲ್ಲಿ ಕೊಂಡೊಯ್ಯಲು ಸಲಹೆ ನೀಡಿದ್ದರು. ಹಾಗೆಯೇ ಈ ಹೊಸ ವಿನ್ಯಾಸದ ಬಿದ್ರಿ ವಸ್ತುಗಳು ನಿರಂತರವಾಗಿ ಉತ್ಪಾದಿಸುವಂತೆ ಮನವಿ ಮಾಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರೀ ಎಂಡಿ. ಶಫಿಯೋದ್ದಿನ್, ವ್ಯವಸ್ಥಾಪಕ ನಿರ್ದೇಶಕರು, ಬ್ಲ್ಯಾಕ್ ಗೋಲ್ಡ್ ಬಿದ್ರಿ ಕುಶಲಕರ್ಮಿಗಳ ಉತ್ಪಾದಕರ ಕಂಪನಿ ನಿಯಮಿತ, ಬೀದರ ಅವರು ಮಾತನಾಡುತ್ತ – ಬಿದ್ರಿ ಕುಶಲಕರ್ಮಿಗಳ ಅಭಿವೃದ್ಧಿಗಾಗಿ ಬಿದ್ರಿ ಕರಕುಶಲ ಉತ್ಪಾದಕರ ಕಂಪನಿ ನೊಂದಣಿಯಾಗಿದ್ದು, ಇದರಲ್ಲಿ ಎಲ್ಲಾ ಬಿದ್ರಿ ಕುಶಲಕರ್ಮಿಗಳು ಸದಸ್ಯತ್ವ ಪಡೆದು ಇದರ ಲಾಭ ಪಡೆಯಲು ವಿನಂತಿಸಿದರು. 25 ದಿವಸಗಳ ತರಬೇತಿ ನೀಡಿದ ವಿನ್ಯಾಸಗಾರರಾದ ಶ್ರೀ ಮುಕ್ತೇಶ್ವರ ಪ್ರಸಾದ ಇವರು ಮಾತನಾಡುತ್ತ – ತರಬೇಡಿಯಲ್ಲಿ ಶಿಭಿರಾರ್ಥಿಗಳು ಪೂರ್ತಿ ಪ್ರಮಾಣದಲ್ಲಿ ಭಾಗವಹಿಸಿ ಹೊಸ ವಿನ್ಯಾಸದ ಬಿದ್ರಿ ವಸ್ತುಗಳನ್ನು ತಯಾರಿಸಿದಕ್ಕೆ ಅಭಿನಂತನೆ ಸಲ್ಲಿಸಿದರು. ಸಮಾರಂಭದಲ್ಲಿ ಮಾಸ್ಟರ್ ತರಬೇತುದಾರ ಶ್ರೀ ಶಫಿಯೋದ್ದಿನ್ ಹಾಗೂ ತರಬೇತಿ ಪಡೆದ 30 ಬಿದ್ರಿ ಕುಶಲಕರ್ಮಿಗಳು ಭಾಗವಹಿಸಿದರು.
ಸಮಾರೋಪ ಸಮಾರಂಭದ ಕೊನೆಯಲ್ಲಿ ಮುಖ್ಯ ಅತಿಥಿಗಣ್ಯರಿಂದ ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮವು ಶ್ರೀ ಸೂರ್ಯಕಾಂತ ಇವರ ಸ್ವಾಗತ ಮತ್ತು ವಂದನಾರ್ಪಣೆಯೊಂದಿಗೆ ಮುಕ್ತಾಯಗೊಳಿಸಲಾಯಿತು.