25 ಕ್ಕೂ ಹೆಚ್ಚು ಕಡೆ ವಾಕಿಂಗ್ ಟ್ರ್ಯಾಕ್, ಓಪನ್ ಜಿಮ್, ಗಾರ್ಡನ್, ಯೋಗಾ ಪ್ಲಾಟ್‍ಫಾರ್ಮ, ಚಿಲ್ಡ್ರನ್ ಪಾರ್ಕ ಮಾಡಲಾಗಿದೆಃ ಪಾಟೀಲ್

ವಿಜಯಪುರ, ಜ.2-ನಗರದ ಅಲ್ಲಲ್ಲಿ ವಾಕಿಂಗ್ ಟ್ರ್ಯಾಕ್, ಓಪನ್ ಜಿಮ್, ಗಾರ್ಡನ್, ಯೋಗಾ ಪ್ಲಾಟ್‍ಫಾರ್ಮ, ಚಿಲ್ಡ್ರನ್ ಪಾರ್ಕ ಸೇರಿದಂತೆ ಎಲ್ಲ ಬಡಾವಣೆಯ ಜನರಿಗೆ ಆರೋಗ್ಯಕ್ಕೆ ಅನಕೂಲವಾಗುವ ದೃಷ್ಟಿಯಿಂದ ನಗರದಲ್ಲಿ ಸುಮಾರು 25 ಕ್ಕೂ ಹೆಚ್ಚು ಕಡೆ ಮಾಡಲಾಗಿದೆ ಮತ್ತು ಇನ್ನೂ ಅವಶ್ಯವಿರುವ ಕಡೆಗಳಲ್ಲಿ ಮಾಡಲಾಗುವದು ಎಂದು ನಗರ ಶಾಸಕ ಬಸನಗೌಡ ರಾ ಪಾಟೀಲ್ ಯತ್ನಾಳ ಹೇಳಿದರು.
ಅವರು ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯಲ್ಲಿ ಮಂಜೂರಿಸಿದ ಒಟ್ಟು 22.50 ಲಕ್ಷ ರೂ ಮೊತ್ತದ ವಾರ್ಡ ನಂ 22ರ ಸಾಯಿಪಾರ್ಕದಲ್ಲಿ ಬರುವ ಗುರುದೇವ ನಗರ ಸೆಪ್ಟಿಕ್ ಟ್ಯಾಂಕ್‍ದಿಂದ ಕೆ.ಎಚ್.ಬಿ ಕಾಲನಿವರೆಗಿನ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ವಾರ್ಡ ನಂ 35 ರ ಅಥಣಿ ರಸ್ತೆಯ ನಂದಿ ನಗರದಲ್ಲಿ ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯಲ್ಲಿ ಮಂಜೂರಿಸಿದ 37.50 ಲಕ್ಷ ರೂ ಮೊತ್ತದ ಒಳಚರಂಡಿ ಹಾಗೂ ಸಮಾಜ ಕಲ್ಯಾಣಇಲಾಖೆಯಿಂದ ಮಂಜೂರಿಸಿದ 35.00 ಲಕ್ಷ ರೂ ಮೊತ್ತದ ಆಂತರಿಕ ಸಿ.ಸಿ ರಸ್ತೆನಿರ್ಮಾಣ ಹೀಗೆ 72.50 ಲಕ್ಷ ರೂ ಮೊತ್ತದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ನಗರದ ತುಂಬೆಲ್ಲ ಅವಶ್ಯವಿರುವ ಜಾಗಗಳಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದ್ದು ಇನ್ನೂ ಸಹ ಎಲ್ಲೆಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಅವಶ್ಯವಿದೆಯೋ ಅಲ್ಲೆಲ್ಲಾ ಅಳವಡಿಸಿ, ಶುದ್ಧ ಕುಡಿಯುವ ನೀರು ನಾಗರಿಕರಿಗೆ ದೊರಕುವಂತೆ ಮಾಡಲಾಗುತ್ತಿದೆ ಎಂದರು.
ನಗರದಲ್ಲಿ ಉದ್ಯಾನವನ ಅಭಿವೃದ್ಧಿಪಡಿಸಲಾಗುತ್ತಿದ್ದು, ಸ್ಮಶಾನಗಳ ಅಭಿವೃದ್ಧಿಗೆ ಹಣ ಮಂಜೂರಿಸಲಾಗಿದೆಯಲ್ಲದೇ ವಿವಿಧಡೆ ಹೈಮಾಸ್ಕ ದೀಪಗಳ ಅಳವಡಿಕೆ, ಪುರಾತನ ಬಾವಿಗಳ ಸ್ವಚ್ಚತೆ ಮಾಡಿ ಗಾರ್ಡನ್‍ಗಳಿಗೆ ನೀರು ಪೂರೈಸಲಾಗುತ್ತಿದೆ, ವಿವಿಧ ಬಡಾವಣೆ/ಕಾಲನಿಗಳಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹೊಸ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದ್ದು, ಕೊಳಗೇರಿ ಅಭಿವೃದ್ಧಿ ಮಂಡಳಿಯ ಇ.ಇ ಕಚೇರಿ ಸ್ಥಾಪನೆಹೊಸ ಜಿಲ್ಲಾ ಕ್ರೀಡಾಂಗಣ ಸ್ಥಾಪನೆ, ದ್ರಾಕ್ಷಿ ಅಭಿವೃದ್ಧಿ ಮಂಡಳಿ ಸ್ಥಾಪನೆ, ವಿವಿಧಡೆ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣ, ಸರಕಾರಿ ಶಾಲೆಗಳ ನವೀಕರಣ, ಪಾಲಿಕೆಯಿಂದ ಮಳಿಗೆಗಳ ಸಂಕೀರ್ಣ ನಿರ್ಮಿಸಿ, ಪಾಲಿಕೆಗೆ ಆದಾಯ ಹೆಚ್ಚಿಸುವದು ಮತ್ತು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವದು, ನಗರಾಭಿವೃದ್ಧಿ ಪ್ರಾಧಿಕಾರದಿಂದ ಹೊಸ ಬಡಾವಣೆಗಳನ್ನು ನಿರ್ಮಿಸುವದು, ಕಿತ್ತೂರುರಾಣಿ ಚನ್ನಮ್ಮ ನಾಟಕ ಮಂದಿರದ ಹೊಸ ಕಟ್ಟಡ, ಓವರ್ ಹೆಡ್ ಟ್ಯಾಂಕ್ (ಓ.ಎಚ್.ಟಿ) ನಿರ್ಮಿಸಲಾಗುತ್ತಿದೆ (ತೊರವಿ ಮತ್ತು ತೊರವಿ ಎಲ್.ಟಿ ನಂ.1,2,3), ನಗರದಲ್ಲಿ ವಿವಿಧಡೆ ಗಣ್ಯರ, ಹುತಾತ್ಮರ, ಸ್ವಾತಂತ್ರ್ಯ ಯೋಧರ ವೃತ್ತ ನಿರ್ಮಾಣ ಹಾಗೂ ರಸ್ತೆ ನಾಮಕರಣ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀಹರ್ಷ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯರಾದ ಲಕ್ಷ್ಮಣ ಜಾಧವ್, ವಿಕ್ರಮ್ ಗಾಯಕವಾಡ, ಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾನಂದ ಬಿರಾದಾರ, ಸಂತೋಷ ದೊಡ್ಡಮನಿ, ಚಂದ್ರು ಚೌಧರಿ, ಪಾಂಡುಸಾಹುಕಾರ ದೊಡ್ಡಮನಿ, ಪ್ರಕಾಶ ಚವ್ಹಾಣ, ಜಿ.ಎಸ್.ತೇಲಗಿ, ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು, ಕಾಲನಿಯ ಹಿರಿಯರು, ನಾಗರಿಕರು, ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.