25 ಎಕರೆ ಹರಗಿ ಸಾಹಸ ಮೆರೆದ ಎತ್ತುಗಳು

ತಾಳಿಕೋಟೆ:ಸೆ.4: ತಾಲೂಕಿನ ಬ.ಸಾಲವಾಡಗಿ ಗ್ರಾಮದ ರೈತ ಜಮೀನಿನ ಮಾಲಿಕ ಚೆನ್ನು ಸಾಹುಕಾರ ಎಂಬವರ ತೊಗರಿ ಬಿತ್ತನೆ ಮಾಡಿದ 25 ಏಕರೆ ಜಮೀನಿನಲ್ಲಿ 10 ಗಂಟೆಯಲ್ಲಿ ಮಶಾಕ ಕಿಂಡಿಮನಿ ಎಂಬವರ ಜೋಡೆತ್ತುಗಳು ಹರಿಗಿ(ಕಸ ಸ್ವಚ್ಚಗೊಳಿಸುವದರೊಂದಿಗೆ ಸಾಧನೆ ಮೇರೆದಿವೆ.
ನಸುಕಿನ ಜಾವ 4 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ 25 ಏಕರೆ ತೊಗರಿ ಜಮೀನಿನಲ್ಲಿಯ ಕಸವನ್ನು ಹರಗಿ ಎತ್ತುಗಳು ಸಾಧನೆ ಮೇರೆದಿವೆ.
ಎತ್ತುಗಳ ಮಾಲಿಕ ಮಶಾಕ ಕಿಂಡಿಮನಿ ಮತ್ತು ಅವರ ಜೋಡೆತ್ತುಗಳನ್ನು ರೈತಾಪಿ ಜನರು ಹಲಗಿ ಮಜಲುಗಳೊಂದಿಗೆ ಗುಲಾಲ್ ಎರಚಿ ಗ್ರಾಮದಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದ್ದಾರೆ.
ಈ ಸಮಯದಲ್ಲಿ ರೈತ ಮುಖಂಡರುಗಳಾದ ಮುದಕನಗೌಡ ರಾರಡ್ಡಿ, ಶ್ರೀಕಾಂತ ಹೊರಗಿನಮನಿ, ಸದ್ದಾಂ ವಾಲಿಕಾರ, ಮುದಕಪ್ಪ ಬಲದಿನ್ನಿ, ಗಿರಿಶ ಜಮ್ಮಲದಿನ್ನಿ, ಮುತ್ತಪ್ಪ ಜಟ್ಟೆಪ್ಪಗೋಳ, ಶರಣಗೌಡ ದೊಡಮನಿ, ಭೀಮನಗೌಡ ದೊಡಮನಿ, ಬಸನಗೌಡ ಅನಂತರಡ್ಡಿ, ಮಂಜು ಹೊರಗಿನಮನಿ, ರಾಜುಗೌಡ ವಠಾರ, ಶಿವರಾಜ ಆರೇರ, ಮಧು ಜಟ್ಟೆಪ್ಪಗೋಳ, ಮುತ್ತುಗೌಡ ಹೊಳಚ್ಚಿ, ಮಹೇಶ ಹೊರಗಿಮನಿ, ಮೊದಲಾದವರು ಪಾಲ್ಗೊಂಡಿದ್ದರು.