25 ಅಂಚೆ ಸಿಬ್ಬಂಧಿಯಿಂದ ರಕ್ತ ದಾನ

ಬೀದರ:ಜೂ.15:ಜಾಗತಿಕ ರಕ್ತದಾನ ದಿನದ ನಿಮಿತ್ಯವಾಗಿ ಬೀದರ ಅಂಚೆ ವಿಭಾಗದ ವತಿಯಿಂದ ಬೀದರ ಪ್ರಧಾನ ಅಂಚೆ ಕಛೇರಿಯಲ್ಲಿ ರಕ್ತದಾನ ಶಿಬಿರವನ್ನು ಎಸ್. ಶ್ರಿಕರ ಬಾಬು ಅಂಚೆ ಅಧೀಕ್ಷಕರು ಬೀದರ ವಿಭಾಗ ಬೀದರ ಹಾಗು ಶ್ರೀಮತಿ. ಮಂಗಲಾ ಭಾಗವತ ಅಂಚೆ ಪಾಲಕರು ಬೀದರ ಪ್ರಧಾನ ಅಂಚೆ ಕಛೇರಿ ಇವರ ನೇÉತೃತ್ವದಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಈ ಶಿಬಿರದಲ್ಲಿ ಮಂಗಲಾ ಭಾಗವತ, ಕಲ್ಲಪ್ಪಾಕೋಣಿ, ಶ್ರೀಧರ ಬಗಾಡೆ, ದತ್ತುರಾವ ಸುರನಾರ, ಹಾವಣ್ಣಾ, ನಾಯಕು, ಇವಾಂಜೆಲಿನ, ಅಭೀನವ ಪುರೋಹಿತ, ಸುರಜ, ಪ್ರಶಾಂತ, ಮಲ್ಲಮ್ಮಾ, ಆನಂದ, ಹುಲಿರಾಜ, ವಿಜಯಕುಮಾರ, ಸುಜಾತಾ, ಪಲ್ಲವಿ, ದತ್ತಪ್ಪಾ, ದತ್ತುರೆಡ್ಡಿ, ಮಧು, ಮುಂತಾದ ಸುಮಾರು 25 ಅಂಚೆ ಸಿಬ್ಬಂಧಿಯವರು ರಕ್ತವನ್ನುದಾನ ಮಾಡಿರುತ್ತಾರೆ